WFI' ಅಧ್ಯಕ್ಷರ ವಿರುದ್ಧ ಲೈಂಗಿಕ ಕಿರುಕುಳ ಆರೋಪ ; ತನಿಖೆಗಾಗಿ 7 ಸದಸ್ಯರ ಸಮಿತಿ ರಚಿಸಿದ 'IOA'

ನವದೆಹಲಿ : ಡಬ್ಲ್ಯುಎಫ್‌ಐ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧದ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದಿದ್ದು, ಈ ಬಗ್ಗೆ ತನಿಖೆ ನಡೆಸಲು ಭಾರತೀಯ ಒಲಿಂಪಿಕ್ ಸಂಸ್ಥೆ (IOA) ಏಳು ಸದಸ್ಯರ ಸಮಿತಿಯನ್ನ ರಚಿಸಿದೆ.
ಅದ್ರಂತೆ, ಈ ಏಳು ಸದಸ್ಯರ ಸಮಿತಿಯಲ್ಲಿ ಮೇರಿ ಕೋಮ್, ಡೋಲಾ ಬ್ಯಾನರ್ಜಿ, ಅಲಕನಂದಾ ಅಶೋಕ್, ಯೋಗೇಶ್ವರ್ ದತ್, ಸಹದೇವ್ ಯಾದವ್ ಮತ್ತು ಇಬ್ಬರು ವಕೀಲರು ಸೇರಿದ್ದಾರೆ.
ಇದಕ್ಕೂ ಮುನ್ನ ಭಾರತೀಯ ಕುಸ್ತಿಪಟುಗಳು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಅಧ್ಯಕ್ಷೆ ಪಿ.ಟಿ.ಉಷಾ ಅವರಿಗೆ ಪತ್ರ ಬರೆದಿದ್ದರು. ವಿನೇಶ್ ಫೋಗಟ್, ಬಜರಂಗ್ ಪುನಿಯಾ, ರವಿ ದಹಿಯಾ ಮತ್ತು ದೀಪಕ್ ಪುನಿಯಾ ಅವರು ಸಹಿ ಮಾಡಿದ ಪತ್ರದಲ್ಲಿ ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಹಲವಾರು ಯುವ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಇನ್ನು ಪತ್ರವು ನಾಲ್ಕು ಬೇಡಿಕೆಗಳನ್ನ ಸಹ ಪಟ್ಟಿ ಮಾಡಿದೆ.
'ಲೈಂಗಿಕ ಕಿರುಕುಳ, ಡಬ್ಲ್ಯುಎಫ್‌ಐ ಅಧ್ಯಕ್ಷರ ರಾಜೀನಾಮೆ, ಡಬ್ಲ್ಯುಎಫ್‌ಐ ವಿಸರ್ಜನೆ ಮತ್ತು ಕುಸ್ತಿಪಟುಗಳೊಂದಿಗೆ ಸಮಾಲೋಚಿಸಿ ಡಬ್ಲ್ಯುಎಫ್‌ಐ ವ್ಯವಹಾರಗಳನ್ನ ನಡೆಸಲು ಹೊಸ ಸಮಿತಿಯನ್ನ ರಚಿಸಲು ತಕ್ಷಣವೇ ಸಮಿತಿಯನ್ನ ನೇಮಿಸುವಂತೆ ನಾವು ಐಒಎಯನ್ನ ವಿನಂತಿಸುತ್ತೇವೆ' ಎಂದು ಪತ್ರದಲ್ಲಿ ತಿಳಿಸಲಾಗಿದೆ.