15,000 ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕ'ರ ನೇಮಕಾತಿ : ಇಂದು ಸಂಜೆ 6ಕ್ಕೆ 'ತಾತ್ಕಾಲಿಕ ಆಯ್ಕೆ' ಪಟ್ಟಿ ಪ್ರಕಟ

ಬೆಂಗಳೂರು: 15,000 ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ( Karnataka Teacher Recruitment ) ಸಂಬಂಧ, ಸ್ಪರ್ಧಾತ್ಮಕ ಪರೀಕ್ಷೆ ಬಳಿಕ, ದಾಖಲಾತಿಗಳ ಪರಿಶೀಲನೆ ನಡೆಸಲಾಗಿತ್ತು. ಇದೀಗ ಇಂದು ಸಂಜೆ 5.30ಕ್ಕೆ ನೇಮಕಾತಿಯ ತಾತ್ಕಾಲಿಕ ಆಯ್ಕೆ ಪ್ರಕಟವಾಗಲಿದೆ.ಈ ಕುರಿತಂತೆ ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡಿರುವಂತ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಹಾಗೂ ಸಕಾಲ ಸಚಿವರು ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ. ನಾಗೇಶ್ ( Minister BC Nagesh ) ಅವರು, ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕ ( Primary School Teacher Recruitment ) ಸಂಬಂಧಿಸಿದ 1:1 'ತಾತ್ಕಾಲಿಕ ಆಯ್ಕೆ' ಪಟ್ಟಿಯನ್ನು ಇಂದು (ನ.18) ಸಂಜೆ 6 ಗಂಟೆ ಬಳಿಕ ಇಲಾಖೆಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ.