ವಿಳಂಬವಾಗುವುದಕ್ಕೂ ಮುನ್ನ ಬಿಜೆಪಿ ಜೊತೆ ಮರು ಮೈತ್ರಿ ಉತ್ತಮ: ಉದ್ಧವ್ ಠಾಕ್ರೆಗೆ ಶಿವಸೇನೆ ಶಾಸಕ

ವಿಳಂಬವಾಗುವುದಕ್ಕೂ ಮುನ್ನ ಬಿಜೆಪಿ ಜೊತೆ ಮರು ಮೈತ್ರಿ ಉತ್ತಮ: ಉದ್ಧವ್ ಠಾಕ್ರೆಗೆ ಶಿವಸೇನೆ ಶಾಸಕ

ಮುಂಬೈ: ಮಹಾರಾಷ್ಟ್ರದಲ್ಲಿ ಶಿವಸೇನೆ ಶಾಸಕರೊಬ್ಬರು ಸಿಎಂ ಉದ್ಧವ್ ಠಾಕ್ರೆಗೆ ಪತ್ರ ಬರೆದಿದ್ದು, ಬಿಜೆಪಿ ಜೊತೆ ಮರು ಮೈತ್ರಿಯೇ ಉತ್ತಮ ಎಂದು ಸಲಹೆ ನೀಡಿದ್ದಾರೆ.

ಜಾರಿ ನಿರ್ದೇಶನಾಲಯದ ತೂಗುಗತ್ತಿಯಲ್ಲಿರುವ ಶಾಸಕ ಪ್ರತಾಪ್ ಸರ್ನಾಯ್ಕ್ ಉದ್ಧವ್ ಠಾಕ್ರೆಗೆ ಪತ್ರ ಬರೆದಿದ್ದು, ವಿಳಂಬವಾಗುವುದಕ್ಕೂ ಮುನ್ನ ಬಿಜೆಪಿ ಜೊತೆ ಮರು ಮೈತ್ರಿ ಮಾಡಿಕೊಳ್ಳುವುದು ಅತ್ಯುತ್ತಮ ಎಂದು ಹೇಳಿದ್ದಾರೆ.

ಜೂ.10 ರಂದು ಪತ್ರ ಬರೆದಿದ್ದು, ಬಿಜೆಪಿ-ಶಿವಸೇನೆ ನಡುವಿನ ಮೈತ್ರಿ ಮುರಿದುಬಿದ್ದಿದ್ದರೂ ಉಭಯ ಪಕ್ಷಗಳ ನಾಯಕರ ನಡುವಿನ ವೈಯಕ್ತಿಕ ಸಾಮರಸ್ಯ ಎಂದಿನಂತೆಯೇ ಇದೆ.

ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಜಾರಿ ನಿರ್ದೇಶನಾಲಯ ಸರ್ನಾಯ್ಕ್ ಗೆ ಸಂಬಂಧಿಸಿದ ಜಾಗಗಳಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದಾಳಿ ನಡೆಸಿತ್ತು. ಶಿವಸೇನೆ ಈ ದಾಳಿಯನ್ನು ರಾಜಕೀಯ ಹಗೆತನ ಎಂದು ಆರೋಪಿಸಿದ್ದಾರೆ.

ನಾನು ಅರ್ಜುನನಂತೆ ಯುದ್ಧ ಮಾಡಿತ್ತಿದ್ದೇನೆ, ನನ್ನ ಸರ್ಕಾರ ಅಥವಾ ನಮ್ಮ ನಾಯಕರ ಬೆಂಬಲ ತೆಗೆದುಕೊಳ್ಳದೇ ಕಳೆದ 7 ತಿಂಗಳಲ್ಲಿ ಏಕಾಂಗಿಯಾಗಿ ಕಾನೂನು ಹೋರಾಟ ನಡೆಸುತ್ತಿದ್ದೇನೆ ಎಂದು ಸರ್ನಾಯ್ಕ್ ಹೇಳಿದ್ದಾರೆ.