ಪುನೀತ್ ಹೆಸರಲ್ಲಿ ಮ್ಯೂಸಿಯಂ, ಪ್ರತಿಮೆ ನಿರ್ಮಾಣಕ್ಕೆ ಆಗ್ರಹ

ದಿ.ಪುನೀತ್ ರಾಜಕುಮಾರ ಅವರ ಹೆಸರಿನಲ್ಲಿ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಪ್ರತಿಮೆ ಹಾಗೂ ಮ್ಯೂಸಿಯಂ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿ ಜೈ ರಾಜವಂಶ ಅಭಿಮಾನಿ ಬಳಗ ಹಾಗೂ ಕನ್ನಡ ಕ್ರಾಂತಿ ದೀಪ ಸಂಘಟನೆ ವತಿಯಿಂದ ತಹಶಿಲ್ದಾರರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. ಕನ್ನಡ ಚಿತ್ರರಂಗದ ಮೇರು ನಟ ದಿ.ಪುನೀತ್ ರಾಜಕುಮಾರ ಅವರು ಸಾಕಷ್ಟು ಸಾಮಾಜಿಕ ಕಾರ್ಯವನ್ನು ಮಾಡಿದ್ದಾರೆ. ಅಲ್ಲದೇ ಕನ್ನಡ ಚಿತ್ರರಂಗದ ಅಭಿವೃದ್ಧಿಗೆ ಮಾತ್ರವಲ್ಲದೆ ಕನ್ನಡ ನಾಡು ನುಡಿಗಾಗಿ ಸಾಕಷ್ಟು ಶ್ರಮಿಸಿದ್ದಾರೆ. ಈ ನಿಟ್ಟಿನಲ್ಲಿ ಅವರ ನೆನಪು ಉಳಿಯುವಂತೆ ಮ್ಯೂಸಿಯಂ, ಸಂಗೀತ ಶಾಲೆಯ ಜೊತೆಗೆ ಹುಬ್ಬಳ್ಳಿಯ ಆಯಕಟ್ಟಿನ ಪ್ರದೇಶದಲ್ಲಿ ಪುನೀತ್ ರಾಜಕುಮಾರ ಅವರ ಪ್ರತಿಮೆಯನ್ನು ಅನಾವರಣಗೊಳಿಸಲು ಜಿಲ್ಲಾಡಳಿತ ಹಾಗೂ ಪಾಲಿಕೆಗೆ ಆದೇಶ ನೀಡಬೇಕು ಎಂದು ಒತ್ತಾಯಿಸಿದರು.