ಹೊಸವರ್ಷದ ಸಂಭ್ರಮದಲ್ಲಿ ಮೊದಲ ಬಾರಿಗೆ ಮದ್ಯಪಾನ ಮಾಡಿದ್ದ ವ್ಯಕ್ತಿ ಪ್ರಾಣ ಕಳೆದುಕೊಂಡ.

ತಮಿಳುನಾಡು: ಇಲ್ಲೊಬ್ಬ ಯುವಕ, ಹೊಸವರ್ಷದಂದು ಸಂಭ್ರಮಾಚರಣೆಯಲ್ಲಿ ಮದ್ಯಪಾನ ಮಾಡಿದ್ದಾನೆ. ಆತ ಇದೇ ಮೊದಲ ಬಾರಿಗೆ ಮದ್ಯಪಾನ ಮಾಡಿದ್ದು. ಆದರೆ ದುರದೃಷ್ಟವಶಾತ್ ಆತ ಪ್ರಾಣ ಕಳೆದುಕೊಂಡಿದ್ದಾನೆ.
ಮೃತ ಸಂತೋಷ್ ಕುಮಾರ್ (23), ಸೇಲಂನ ಮಲ್ಲೂರು ವೆಂಗಂಪಟ್ಟಿ ಪಟ್ಟಣದ ನಿವಾಸಿಯಾಗಿದ್ದು, ತನ್ನ ಆರು ಮಂದಿ ಸ್ನೇಹಿತರೊಂದಿಗೆ ರೆಸಾರ್ಟ್‌ಗೆ ತೆರಳಿದ್ದ.
ಮದ್ಯಪಾನ ಮಾಡಿದ ನಂತರ ಸಂತೋಷ್, ಸ್ವಲ್ಪ ಅಸ್ವಸ್ಥನಾಗಿದ್ದಾನೆ. ಈ ಸಂದರ್ಭ ಈತನಿಗೆ ಉಸಿರಾಡಲು ಸ್ವಲ್ಪ ಸಮಸ್ಯೆ ಆಗಿದೆ ಎಂದು ವರದಿಯಾಗಿದೆ. ತಕ್ಷಣ ಆತನ ಸ್ನೇಹಿತರು ಮತ್ತು ಕೆಲವು ಸ್ಥಳೀಯರು ಅವನನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ಅವರು ತಲುಪಿದ ಮೇಲೆ ಯುವಕ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ಘೋಷಿಸಿದರು. ಈ ಕುರಿತು ಯೇರ್ಕಾಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯೇರ್ಕಾಡು ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು 'ನಮ್ಮ ಪ್ರಾಥಮಿಕ ತನಿಖೆಯ ಪ್ರಕಾರ, ಅವನಿಗೆ ಯಾವುದೇ ಕೆಟ್ಟ ಅಭ್ಯಾಸಗಳಿಲ್ಲ. ಹೊಸ ವರ್ಷವನ್ನು ಸ್ನೇಹಿತರೊಂದಿಗೆ ಆಚರಿಸಲು ಬಯಸಿದ ಆತ, ಯೇರ್ಕಾಡು ಬಳಿ ರೆಸಾರ್ಟ್ ಅನ್ನು ಬುಕ್ ಮಾಡಿದ್ದ. ಸಂತೋಷ್ ಮದ್ಯ ಸೇವಿಸಿರುವುದು ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಬಹಿರಂಗವಾಗಿದೆ.