ವಿಧಾನಪರಿಷತ್ ಸದಸ್ಯರಾಗಿ 7 ಸದಸ್ಯರು ಪ್ರಮಾಣವಚನ ಸ್ವೀಕಾರ

ವಿಧಾನಪರಿಷತ್ ಸದಸ್ಯರಾಗಿ 7 ಸದಸ್ಯರು ಪ್ರಮಾಣವಚನ ಸ್ವೀಕಾರ

ಬೆಂಗಳೂರು: ಇತ್ತೀಚಿಗೆ ನಡೆದಿದ್ದಂತ ಕರ್ನಾಟಕ ವಿಧಾನ ಪರಿಷತ್ ಚುನಾವಣೆಯಲ್ಲಿ 7 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದರು. ಬಿಜೆಪಿಯಿಂದ ನಾಲ್ವರು, ಕಾಂಗ್ರೆಸ್ ನಿಂದ ಇಬ್ಬರು ಹಾಗೂ ಜೆಡಿಎಸ್ ನಿಂದ ಒಬ್ಬರು ಆಯ್ಕೆಗೊಂಡಿದ್ದರು. ಇಂದು ಏಳು ಸದಸ್ಯರು ವಿಧಾನಸೌಧದಲ್ಲಿ ನಡೆದಂತ ಸರಳ ಸಮಾರಂಭದಲ್ಲಿ ಪರಿಷತ್ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದರು. ರಾಜ್ಯ ವಿಧಾನಸಭೆಯಿಂದ ವಿಧಾನ ಪರಿಷತ್ ಗೆ ಆಯ್ಕೆ 7 ಸದಸ್ಯರ ಆಯ್ಕೆಗಾಗಿ ಇತ್ತೀಚಿಗೆ ಚುನಾವಣೆ ನಡೆದಿತ್ತು. ಈ ಚುನಾವಣೆಯಲ್ಲಿ ಬಿಜೆಪಿಯಿಂದ ಲಕ್ಷ್ಮಣ್ ಸವದಿ, ಛಲವಾದಿ ನಾರಾಯಣಸ್ವಾಮಿ, ಹೇಮಲತಾ ಮತ್ತು ಕೇಶವ ಪ್ರಸಾದ್ ಆಯ್ಕೆಯಾಗಿದ್ದರು. ಕಾಂಗ್ರೆಸ್ ನಿಂದ ಅಬ್ದುಲ್ ಜಬ್ಬಾರ್, ನಾಗರಾಜ್ ಯಾದವ್ ಆಯ್ಕೆಯಾಗಿದ್ರೇ, ಜೆಡಿಎಸ್ ಪಕ್ಷದಿಂದ ಟಿ.ಎ ಶರವಣ ಆಯ್ಕೆಯಾಗಿದ್ದಾರು. ಹೀಗೆ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದಂತ 7 ಸದಸ್ಯರು ಇಂದು ನೂತನ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದರು. ಅಲ್ಲಾ ಹೆಸರಿನಲ್ಲಿ ಅಬ್ದುಲ್ ಜಬ್ಬರ್ ಪ್ರಮಾಣ ವಚನ ಸ್ವೀಕಿಸಿದ್ರೇ, ಭಗವಂತನ ಹೆಸರಿನಲ್ಲಿ ಲಕ್ಷ್ಮಣ್ ಸವದಿ, ನಾಗರಾಜ್ ಯಾದವ್, ಬಾಬಾ ಸಾಹೇಬ್ ಅಂಬೇಡ್ಕರ್ ಹೆಸರಿನಲ್ಲಿ ಛಲವಾಜಿ ನಾರಾಯಣಸ್ವಾಮಿ, ಶಿರಡಿ ಸಾಯಿಬಾಬ ಹಾಗೂ ತಿರುಪತಿ ವೆಂಕಟೇಶ್ವರನ ಹೆಸರಿನಲ್ಲಿ ಟಿ.ಎ ಶರವಣ, ವಾಲ್ಮೀಕಿ ಹೆಸರಿನಲ್ಲಿ ಹೇಮಲತಾ ನಾಯಕ್ ಪ್ರಮಾಣ ವಚನ ಸ್ವೀಕರಿಸಿದು.