ಮನೆ ಕಟ್ಟೋರಿಗೆ ಶಾಕಿಂಗ್ ನ್ಯೂಸ್ : ಸಿಮೆಂಟ್, ಕಬ್ಬಿಣ, ಇಟ್ಟಿಗೆ ಸೇರಿ ನಿರ್ಮಾಣ ಸಾಮಗ್ರಿ ಬೆಲೆಯಲ್ಲಿ ಏರಿಕೆ

ಬೆಂಗಳೂರು : ಮನೆ ಕಟ್ಟೋರಿಗೆ ಇದೀಗ ಬೆಲೆ ಏರಿಕೆಯ ಶಾಕ್ ಎದುರಾಗಿದ್ದು, ಕಬ್ಬಿಣ, ಇಟ್ಟಿಗೆ ಮತ್ತು ಸಿಮೆಂಟ್ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಕಬ್ಬಿಣ, ಸಿಮೆಂಟ್, ಮರಳು, ಇಟ್ಟಿಗೆ ಸೇರಿ ಎಲ್ಲಾ ವಸ್ತುಗಳ ಬೆಲೆಯೂ ಬಹುತೇಕ ದುಪ್ಪಟ್ಟಾಗಿದೆ.
ಒಂದು ವರ್ಷದ ಅವಧಿಯಲ್ಲೇ ಕಬ್ಬಿಣದ ಬೆಲೆ ಶೇ 58ರಷ್ಟು ಹೆಚ್ಚಾದರೆ, ಸಿಮೆಂಟ್ ದರ ಶೇ 35 ರಷ್ಟು ಏರಿಕೆಯಾಗಿದೆ. ಪಿವಿಸಿ ಪೈಪ್ ದರ ಶೇ 40ರಷ್ಟು, ಎಲೆಕ್ಟ್ರಿಕಲ್ ಕೇಬಲ್‌ಗಳ ದರ ಶೇ 45, ಸ್ಯಾನಿಟರಿ ಸಲಕರಣೆಗಳ ದರ ಶೇ 15ರಷ್ಟು ಹೆಳ್ಳವಾಗಿದೆ.
ಇನ್ನು ಒಂದು ಟನ್ ಗೆ 54 ಸಾವಿರ ರೂ. ಇದ್ದ ಕಬ್ಬಿಣದ ದರ ಇದೀಗ 68 ರಿಂದ 78 ಸಾವಿರ ರೂ.ವರೆಗೆ ಏರಿಕೆಯಾಗಿದೆ. ಸಿಮೆಂಟ್ ದರ 270 ರೂ.ನಿಂದ 480 ರಿಂದ 550 ರೂ.ಗೆ ಹೆಚ್ಚಾಗಿದೆ. ಎಂ ಸ್ಯಾಂಡ್ ದರ 1700 ರೂ.ನಿಂದ 2,500 ರೂ.ಗೆ ಏರಿಕೆಯಾಗಿದೆ. ಇದರ ಜೊತೆಗೆ ಜಿಎಸ್ ಟಿ ಜಿಎಸ್ ಟಿ ಹೊರೆಯೂ ಹೆಚ್ಚಾಗುತ್ತಿದ್ದು, ಮನೆ ಕಟ್ಟೋರಿಗೆ ತೀವ್ರ ಸಂಕಷ್ಟ ಎದುರಾಗಿದೆ.