ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರುಗಳಿಗೆ ಕೋವಿ ಶೀಲ್ಡ್ ಲಸಿಕೆ ನೀಡಲಾಗಿದೆ.

ಇಂದು ಬೆಂಗಳೂರಿನ KUWJ ( Karnataka Union of Working Journalists ) ಕೇಂದ್ರ ಕಛೇರಿಯಲ್ಲಿ ಬೆಂಗಳೂರು ನಗರದ 100 ಕ್ಕೂ ಅಧಿಕ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರುಗಳಿಗೆ ಕೋವಿ ಶೀಲ್ಡ್ ಲಸಿಕೆಯನ್ನು ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ ಮೂರು ಗಂಟೆಯವರೆಗೂ ನೀಡಿದ ಆಗೋಗ್ಯ ಇಲಾಖೆಯ ಸಿಸ್ಟರ್ಸ್ ಗಳಾದ ವಿಜಯ,ಶುಷ್ಮಾ ಹಾಗೂ ಬ್ರದರ್ ಉಮಾಶಂಕರ್ ರವರನ್ನು ಕೆ.ಯು.ಡಬ್ಲು.ಜೆ. ಯ ರಾಜ್ಯಧ್ಯಕ್ಷರಾದ ಶಿವಾನಂದ ತಗಡೂರು ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಜಿ.ಸಿ.ಲೋಕೇಶ ರವರು ಶಾಲು ಹಾರ ಹಾಕುವುದರ ಮುಖಾಂತರ ಸನ್ಮಾನಿಸುತ್ತಿರುವುದು ಜೊತೆಯಲ್ಲಿ ರಾಜ್ಯ ಕಾರ್ಯದರ್ಶಿಗಳಾದ ಬಂಗ್ಲೆ ಮಲ್ಲಿಕಾರ್ಜುನ,ಬೆಂಗಳೂರು ನಗರ ಜಿಲ್ಲಾಧ್ಯಕ್ಷರಾದ ಸೋಮಶೇಖರ್ ಗಾಂಧಿ ಹಾಗೂ ಬೆಂಗಳೂರು ನಗರ ಪ್ರಧಾನ ಕಾರ್ಯದರ್ಶಿಗಳಾದ ದೇವರಾಜ್ ರವರು ಉಪಸ್ಥಿತರಿದ್ದರು.

ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರುಗಳಿಗೆ ಕೋವಿ ಶೀಲ್ಡ್ ಲಸಿಕೆ ನೀಡಲಾಗಿದೆ.