ಮೀಟೂ' ಪ್ರಕರಣದಲ್ಲಿ ನಟ ಅರ್ಜುನ್ ಸರ್ಜಾಗೆ ಕ್ಲೀನ್ ಚೀಟ್

ಬೆಂಗಳೂರು: ನಟ ಅರ್ಜುನ್ ಸರ್ಜಾ (Arjun Sarja) ವಿರುದ್ಧ ನಟಿ ಶೃತಿ ಹರಿಹರನ್ (Sruthi Hariharan) ಮೀಟೂ (Me Too) ಆರೋಪ ಮಾಡಿದ್ದರು. ಮೂರು ವರ್ಷಗಳ ಹಿಂದೆ ಮಾಡಿದ್ದಂತ ಆರೋಪ ಕುರಿತಂತೆ ತನಿಖೆ ನಡೆಸಿದ್ದಂತ ಪೊಲೀಸರು, ಯಾವುದೇ ಸಾಕ್ಷ್ಯ ಸಿಗದ ಕಾರಣ, ಬಿ.ರಿಪೋರ್ಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ಅಂದಹಾಗೇ ಅರುಣ್ ವೈದ್ಯನಾಥನ್ ನಿರ್ದೇಶನದ ವಿಸ್ಮಯ ಚಿತ್ರದಲ್ಲಿ ಶ್ರುತಿ ಹರಿಹರನ್ ಮತ್ತು ಅರ್ಜುನ್ ಸರ್ಜಾ ಗಂಡ-ಹೆಂಡತಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಸಂದರ್ಭದಲ್ಲಿಯೇ ತಮ್ಮ ಮೇಲೆ ನಟ ಅರ್ಜುನ್ ಸರ್ಜಾ ಲೈಂಗಿಕ ಕಿರುಕುಳ ನೀಡಿದ್ದಾಗಿ ನಟಿ ಶ್ರುತಿ ಹರಿಹರನ್ ಮೀಟೂ ಆರೋಪ ಮಾಡಿದ್ದರು.
2018ರಲ್ಲಿ ಈ ವಿವಾದವನ್ನು ರೆಬೆಲ್ ಸ್ಟಾರ್ ಅಂಬರೀಷ್ ನೇತೃತ್ವದಲ್ಲಿ ಸಭೆ ನಡೆಸಿ, ಬಗೆ ಹರಿಸೋ ಪ್ರಯತ್ನಕ್ಕೆ ನಡೆಸಲಾಗಿತ್ತು. ಆದ್ರೇ ಶ್ರುತಿ ಹರಿಹರನ್ ಅರ್ಧಕ್ಕೆ ಸಭೆಯಿಂದ ಎದ್ದು ಹೊರ ನಡೆದ ಕಾರಣ ಬಗೆಹರಿದಿರಲಿಲ್ಲ. ಈ ಹಿನ್ನಲೆಯಲ್ಲಿ ಕಬ್ಬನ್ ಪಾರ್ಕ್ ಠಾಣೆಯಲ್ಲಿ (Cubbon Park Police) ಅರ್ಜುನ್ ಸರ್ಜಾ ವಿರುದ್ಧ ದೂರು ದಾಖಲಾಗಿತ್ತು. ಮೂರು ವರ್ಷಗಳ ಬಳಿಕ ನಟಿ ಶ್ರುತಿಹರಿಹರ್ ಮಾಡಿದ್ದ ಆರೋಪಕ್ಕೆ ಸೂಕ್ತ ಸಾಕ್ಷಿ ಸಿಗದ ಕಾರಣ, ಪೊಲೀಸರು ನ್ಯಾಯಾಲಯಕ್ಕೆ ನಟ ಅರ್ಜುನ್ ಸರ್ಜಾ ವಿರುದ್ಧ ಬಿ ರಿಪೋರ್ಟ್ ಸಲ್ಲಿಸಿದ್ದಾರೆ. ಹೀಗಾಗಿ ಅರ್ಜುನ್ ಸರ್ಜಾ ಅವರಿಗೆ ಮೀಟೂ ಪ್ರಕರಣದಲ್ಲಿ ಕ್ಲೀನ್ ಚೀಟ್ ಸಿಕ್ಕಂತೆ ಆಗಿದೆ.