ಉಕ್ರೇನ್​ನ ಅಪಾರ್ಟ್​ಮೆಂಟ್ ಮೇಲೆ ರಷ್ಯಾದ ಕ್ಷಿಪಣಿ ದಾಳಿ; 30 ಮಂದಿ ಸಾವು!

ಉಕ್ರೇನ್​ನ ಅಪಾರ್ಟ್​ಮೆಂಟ್ ಮೇಲೆ ರಷ್ಯಾದ ಕ್ಷಿಪಣಿ ದಾಳಿ; 30 ಮಂದಿ ಸಾವು!

ರಷ್ಯಾ & ಉಕ್ರೇನ್ ನಡುವಿನ ಯುದ್ಧ ಮುಗಿಯುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ. ಉಕ್ರೇನ್​ನ ದ್ನಿಪ್ರೋ ನಗರದ 9 ಅಂತಸ್ತಿನ ಅಪಾರ್ಟ್​ಮೆಂಟ್ ಕಟ್ಟಡದ ಮೇಲೆ ರಷ್ಯಾ ಕ್ಷಿಪಣಿ ದಾಳಿ ನಡೆಸಿದ್ದು, ಈ ದಾಳಿಯಲ್ಲಿ ಸುಮಾರು 30 ಜನರು ಸಾವನ್ನಪ್ಪಿ, 30ಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕ್ಷಿಪಣಿ ದಾಳಿ ಕುರಿತು ಪ್ರತಿಕ್ರಿಯೆ ನೀಡಿರುವ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ನಮ್ಮ ಜನರ ಜೀವ ಉಳಿಸಲು ಕೊನೆಯವರೆಗೂ ರಕ್ಷಣಾ ಕಾರ್ಯಾಚರಣೆ ನಡೆಸಲಾಗುವುದು ಎಂದಿದ್ದಾರೆ