ಬೆಂಗಳೂರು ನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೋಪಿನಾಥ ರೆಡ್ಡಿ ಭರ್ಜರಿ ಗೆಲುವು
ಬೆಂಗಳೂರು: ಇಂದು ಪರಿಷತ್ ಚುನಾವಣೆಗೆ ಡಿಸೆಂಬರ್ 10ರಂದು ನಡೆದಂತ ಮತದಾನದ ಮತಎಣಿಕೆ ಕಾರ್ಯ ನಡೆಯುತ್ತಿದೆ. ಈ ಮತಎಣಿಕೆ ಕಾರ್ಯದಲ್ಲಿ ಬಿಜೆಪಿ ನಗರ ಕ್ಷೇತ್ರದ ಅಭ್ಯರ್ಥಿ ಗೋಪಿನಾಥ ರೆಡ್ಡಿಯವರು ಭರ್ಜರಿ ಗೆಲುವು ಸಾಧಿಸಿದ್ದಾರೆ.
ತೀವ್ರ ಕುತೂಹಲ ಮೂಡಿಸಿದ್ದಂತ ಬೆಂಗಳೂರು ನಗರ ಪರಿಷತ್ ಚುನಾವಣೆಯ ಫಲಿತಾಂಶ ಹೊರ ಬಿದ್ದಿದೆ.
ಅಂದಹಾಗೇ ತಮ್ಮ ವಿರುದ್ಧ ಇಲ್ಲ ಸಲ್ಲದ ಆರೋಪವನ್ನು ಕಾಂಗ್ರೆಸ್ ಮಾಡುತ್ತಿದೆ. ಆ ರೀತಿಯ ಯಾವುದೇ ಘಟನೆ ನಡೆದಿಲ್ಲ ಎಂಬುದಾಗಿ ಕೆಜಿಎಫ್ ಬಾಬು ಅವರು ಇಬ್ಬರು ಪತ್ನಿಯರ ಸಹಿತ ಸುದ್ದಿಗೋಷ್ಠಿ ನಡೆಸಿ ಕ್ಲಾರಿಫಿಕೇಷನ್ ಮಾಡಿದ್ದರು. ಕುಟುಂಬ ಸಮೇತರಾಗಿ ಸುದ್ದಿಗೋಷ್ಠಿಯಲ್ಲಿ ಕಣ್ಣೀರಿಟ್ಟಿದ್ದರು. ಆದ್ರೂ ಅವರ ಕಣ್ಣೀರು ವರ್ಕ್ ಔಟ್ ಆಗಿಲ್ಲ. ಕೆಜಿಎಫ್ ಬಾಬು ಸೋಲುಕಂಡು, ಬಿಜೆಪಿ ಗೋಪಿನಾಥ್ ಗೆಲುವು ಸಾಧಿಸಿದ್ದಾರೆ.