'ಫೆ. 6ಕ್ಕೆ ಬೆಂಗಳೂರಿಗೆ' ಮತ್ತೆ ಪ್ರಧಾನಿ ಆಗಮನ : 'ಮೋದಿ ರೋಡ್ ಶೋ'ಗೆ ಭರ್ಜರಿ ಪ್ಲಾನ್

'ಫೆ. 6ಕ್ಕೆ ಬೆಂಗಳೂರಿಗೆ' ಮತ್ತೆ ಪ್ರಧಾನಿ ಆಗಮನ : 'ಮೋದಿ ರೋಡ್ ಶೋ'ಗೆ ಭರ್ಜರಿ ಪ್ಲಾನ್

ಬೆಂಗಳೂರು : ಫೆಬ್ರವರಿ 6ರಂದು ಬೆಂಗಳೂರಿಗೆ ಮತ್ತೆ ಪ್ರಧಾನಿ ಆಗಮನ ಹಿನ್ನೆಲೆ ಮೆಗಾ ರೋಡ್ ಶೋಗೆ ಭರ್ಜರಿ ಪ್ಲಾನ್ ಮಾಡಲಾಗುತ್ತಿದ್ದು, ಮುಂದಿನ ಚುನಾವಣೆಗೆ ರಣತಂತ್ರ ರೂಪಿಸುತ್ತಿದ್ದಾರೆ.

ಫೆಬ್ರವರಿ 6ರಂದು ಬೆಂಗಳೂರಿನ ಹೆಚ್‌ ಎ ಎಲ್‌ನಲ್ಲಿ ಕಾರ್ಯಕ್ರಮದ ನಿಮಿತ್ತ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದಾರೆ. ರಾಜ್ಯಕ್ಕೆ ಮತ್ತೆ ಆಗಮನ ವೇಳೆ ಬೆಂಗಳೂರ ಪ್ರಮುಖ ನಗರಗಳಲ್ಲಿ ರೋಡ್ ಶೋಗೆ ರಾಜ್ಯ ಬಿಜೆಪಿ ಮನವಿ ಮಾಡಲಾಗಿದೆ.

ಹುಬ್ಬಳ್ಳಿಯಲ್ಲಿ ನಡೆಸಿದ ರೋಡ್‌ ಶೋ ಮಾದರಿಯಲ್ಲಿ ಮೂರು ಕ್ಷೇತ್ರಗಳ ಟಾರ್ಗೆಟ್ ಮಾಡಿ ರೋಡ್ ಶೋಗೆ ತಂತ್ರ ರೂಪಿಸಲಾಗಿದೆ. ಮಹದೇವಪುರ, ಕೆ.ಆರ್.ಪುರಂ, ಸಿ.ವಿ.ರಾಮನ್ ನಗರ ಕೇಂದ್ರೀಕರಿಸಿ ರೋಡ್ ಶೋ ರೂಟ್ ಮ್ಯಾಪ್ ಮಾಡಲಾಗಿದೆ.

ಈಗಾಗಲೇ ಹುಬ್ಬಳ್ಳಿ ರೋಡ್ ಶೋನಿಂದ ರಾಜ್ಯ ಬಿಜೆಪಿ ನಾಯಕರು ಉತ್ಸಹದಲ್ಲಿ ತೊಡಗಿದ್ದಾರೆ . ಒಂದು ಬಾರಿ ಮೋದಿ ರೋಡ್ ಶೋ ನಡೆಸಿದ್ರೆ ವಿರೋಧಿ ಅಲೆ ದೂರ ವಾಗಲು ಸಹಾಯ ಎಂಬ ಲೆಕ್ಕಚಾರದಲ್ಲಿ ಬಿಜೆಪಿ ನಾಯಕರು ಸಿದ್ದತೆಗಾಗಿ ಭರ್ಜರಿ ಪ್ಲ್ಯಾನ್‌ ಮಾಡಲಾಗಿದೆ. ಫೆಬ್ರವರಿ 6ರಂದು ಸಿಲಿಕಾನ್‌ ಸಿಟಿ ಬೆಂಗಳೂರಿಗೆ ಮತ್ತೆ ಮೋದಿ ಆಗಮಿಸುತ್ತಿದ್ದಂತೆ ಸಿಟಿ ಜನರಿಗೆ ಟ್ರಾಫಿಕ್‌ ಬಿಸಿ ತಟ್ಟುವುದು ಗ್ಯಾರಂಟಿಯಾಗಿದೆ.