ಅಹಿಂಸೆ, ಮಾತುಕತೆ ಸಮಸ್ಯೆಗಳ ಪರಿಹಾರಕ್ಕೆ ಮಾರ್ಗ: ಬಸವರಾಜ ಬೊಮ್ಮಾಯಿ

ಅಹಿಂಸೆ, ಮಾತುಕತೆ ಸಮಸ್ಯೆಗಳ ಪರಿಹಾರಕ್ಕೆ ಮಾರ್ಗ: ಬಸವರಾಜ ಬೊಮ್ಮಾಯಿ

ಬೆಂಗಳೂರು: 'ಯಾವುದೇ ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತು ಧಾರ್ಮಿಕ ಸಮಸ್ಯೆಗಳನ್ನು ಅಹಿಂಸೆಯ ಮಾರ್ಗವನ್ನು ಬಿಡದೇ ಮಾತುಕತೆಯ ಮೂಲಕವೇ ಬಗೆಹರಿಸಿಕೊಳ್ಳಬೇಕು' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ರಾಷ್ಟ್ರೀಯ ಏಕತಾ ದಿನಾಚರಣೆ ಅಂಗವಾಗಿ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಭಾವಚಿತ್ರಕ್ಕೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಶುಕ್ರವಾರ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

'ಭಾರತ ಹಲವು ಭಾಷೆಗಳು, ಸಂಸ್ಕೃತಿಗಳಿಂದ ಕೂಡಿರುವ ದೇಶ. ಒಗ್ಗಟ್ಟಾಗಿ, ಒಕ್ಕೂಟವಾಗಿ, ಸ್ವತಂತ್ರವಾಗಿ 75 ವರ್ಷಗಳ ಕಾಲ ಪ್ರಜಾಪ್ರಭುತ್ವವನ್ನು ಉಳಿಸಿಕೊಂಡು ಬಂದಿರುವುದು ಬಹಳ ದೊಡ್ಡ ಸಾಧನೆ. ನಾವು ನಂಬಿರುವ ಸತ್ಯ ಮತ್ತು ಅಹಿಂಸೆ ಮುಂದುವರಿಯಬೇಕು' ಎಂದರು.