ರಾಷ್ಟ್ರಪತಿಗಳಿಗೆ 'ರಾಮಾಯಣ ದರ್ಶನಂ'- 'ಪರ್ವ' ಕಾದಂಬರಿ ನೀಡಿದ ಸಚಿವ ಸುನಿಲ್ ಕುಮಾರ್

ರಾಷ್ಟ್ರಪತಿಗಳಿಗೆ 'ರಾಮಾಯಣ ದರ್ಶನಂ'- 'ಪರ್ವ' ಕಾದಂಬರಿ ನೀಡಿದ ಸಚಿವ ಸುನಿಲ್ ಕುಮಾರ್

ಬೆಂಗಳೂರು: ಘನತೆವೆತ್ತ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ ಸುನಿಲ್ ಕುಮಾರ್ ಅವರು ಇಂದು ಬೆಂಗಳೂರಿನ ರಾಜಭವನದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದರು.

ಇದೊಂದು ಸೌಹಾರ್ದಯುತ ಭೇಟಿಯಾಗಿತ್ತು. ಈ ಸಂದರ್ಭದಲ್ಲಿ ಶ್ರೀ ಸುನಿಲ್ ಕುಮಾರ್ ಅವರು ಕುವೆಂಪು ಅವರ' ಶ್ರೀ ರಾಮಾಯಣ ದರ್ಶನಂ' ಕೃತಿಯ ಇಂಗ್ಲಿಷ್ ಅನುವಾದಿತ ಪುಸ್ತಕ ಹಾಗೂ ಡಾ.ಎಸ್‌ಎಲ್ ಭೈರಪ್ಪ ಅವರ ,'ಪರ್ವ' ಕಾದಂಬರಿಯ ಇಂಗ್ಲಿಷ್ ಅನುವಾದಿತ ಕೃತಿಯನ್ನು ರಾಷ್ಟ್ರಪತಿಯವರಿಗೆ ಕೊಡುಗೆಯಾಗಿ ನೀಡಿದರು.

Today called on @Presidentofindia Sri Ramanath Kovind Ji at Rajbhavan in Bengaluru.
@presidentofindia@BSBommai @TCGehlot
ಕರ್ನಾಟಕ ರಾಜ್ಯ ಪ್ರವಾಸದಲ್ಲಿರುವ ಘನತೆವೆತ್ತ ರಾಷ್ಟ್ರಪತಿ ಶ್ರೀ ರಾಮನಾಥ್ ಕೋವಿಂದ್ ಅವರನ್ನು ಇಂದು ರಾಜಭವನದಲ್ಲಿ ಭೇಟಿಯಾಗಿ ಗೌರವಿಸಲಾಯಿತು.
@Presidentofindia@TCGehlot @BSBommai pic.twitter.com/dVTnENjn3q

— Sunil Kumar Karkala (@karkalasunil)