ಕಂಬಳ ಕೂಟಕ್ಕೆ ನಿಷೇಧದ ಭೀತಿ

ಪ್ರಾಣಿ ದಯಾ ಸಂಘ ಪೇಟಾ ಜನಪದ ಕ್ರೀಡೆ ಕಂಬಳ ಕೂಟ ನಿಷೇಧಿಸುವಂತೆ ಮತ್ತೆ ಸುಪ್ರಿಂ ಕೋರ್ಟ್ ಮೊರೆ ಹೋಗಿದೆ. ಈ ಬಾರಿಯ ಕಂಬಳ ಋತು ಆರಂಭವಾಗಿದ್ದು ಮತ್ತೆ ಸಂಕಷ್ಟ ಎದುರಾಗುತ್ತಾ ಎಂಬ ಆತಂಕ ಅಭಿಮಾನಿಗಳಲ್ಲಿದೆ. ಈ ಹಿಂದೆ ಕಂಬಳಕ್ಕೆ ನಿಷೇಧದ ಆತಂಕ ಎದುರಾದಾಗ ರಾಜ್ಯ ಸರ್ಕಾರ ಕಾನೂನು ತಿದ್ದುಪಡಿ ಮಾಡಿ ಸುಗ್ರೀವಾಜ್ಞೆ ಹೊರಡಿಸಿತ್ತು. ಇದಕ್ಕೆ ರಾಷ್ಟ್ರಪತಿ ಅಂಕಿತ ಹಾಕುವ ಮೂಲಕ ಕಂಬಳಕ್ಕೆ ಅವಕಾಶ ಮಾಡಿಕೊಟ್ಟಿದ್ದರು. ಇದೀಗ ಮತ್ತೆ ಪೇಟಾ ಕೋರ್ಟ್ ಮೆಟ್ಟಿಲೇರಿದೆ.