ಪೊಲೀಸರ ವಿರುದ್ಧದ ಆರೋಪಗಳಿಗೆ ಕಡಿವಾಣ ಹಾಕಲು ಬಾಡಿವೋರ್ನ್ ಕ್ಯಾಮೆರಾ ಬಳಕೆ

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ನಗರದ ಪೊಲೀಸರ ವಿರುದ್ಧ ಸುಲಿಗೆ, ಅನುಚಿತ ವರ್ತನೆ ಇತ್ಯಾದಿ ಆರೋಪಗಳು ಮೇಲಿಂದ ಮೇಲೆ ಬರಲು ಆರಂಭವಾಗಿದ್ದವು. ಇದಕ್ಕೆ ಕಡಿವಾಣ ಹಾಕಲು ಆಗ್ನೇಯ ವಿಭಾಗ ಡಿಸಿಪಿ ಸಿ.ಕೆ.ಬಾಬಾ ಅವರು ಮುಂದಾಗಿದ್ದು, ಕಾನೂನು & ಸುವ್ಯವಸ್ಥೆ ಪೊಲೀಸರಿಗೆ ಬಾಡಿವೋರ್ನ್ ಕ್ಯಾಮೆರಾ ಬಳಕೆಗೆ ಚಾಲನೆ ನೀಡಲಾಗಿದೆ. ಈ ಕ್ಯಾಮೆರಾ ಬಳಕೆಯಿಂದಾಗಿ ಪೊಲೀಸರ ನಡವಳಿಕೆಯನ್ನು ನೋಡಿಕೊಳ್ಳಬಹುದು. ವಿಡಿಯೋ ರೆಕಾರ್ಡ್ ಅನ್ನು ಡಿಸಿಪಿ ಮಾನಿಟರಿಂಗ್ ಮಾಡುತ್ತಾರೆ.