ವೀರ ಸಿಂಹ ರೆಡ್ಡಿ’ ಚಿತ್ರಕ್ಕೆ ಭರ್ಜರಿ ಓಪನಿಂಗ್​

ವೀರ ಸಿಂಹ ರೆಡ್ಡಿ’ ಚಿತ್ರಕ್ಕೆ ಭರ್ಜರಿ ಓಪನಿಂಗ್​

ನಂದಮೂರಿ ಬಾಲಕೃಷ್ಣ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ವೀರ ಸಿಂಹ ರೆಡ್ಡಿ’ ಇಂದು ಬಿಡುಗಡೆ ಆಗಿದೆ. ತೆಲುಗಿನ ಈ ಸಿನಿಮಾಗೆ ಅದ್ದೂರಿ ಓಪನಿಂಗ್ ಸಿಕ್ಕಿದೆ. ಅನೇಕ ಕಡೆಗಳಲ್ಲಿ ಮುಂಜಾನೆಯೇ ಶೋ ಆರಂಭ ಆಗಿದೆ. ಬಾಲಯ್ಯ ಅಭಿಮಾನಿಗಳು ಮುಗಿಬಿದ್ದು ಈ ಚಿತ್ರವನ್ನು ನೋಡುತ್ತಿದ್ದಾರೆ. ಕನ್ನಡದ ಖ್ಯಾತ ನಟ ದುನಿಯಾ ವಿಜಯ್​ ಕೂಡ ಈ ಸಿನಿಮಾದಲ್ಲಿ ನಟಿಸಿರುವುದರಿಂದ ಕರ್ನಾಟಕದಲ್ಲೂ ಚಿತ್ರದ ಹೈಪ್​ ಹೆಚ್ಚಾಗಿದೆ.