ಕೊಚಿಮುಲ್ ಇಬ್ಭಾಗ ತಾರಕಕ್ಕೇರಿದ ವಾಕ್ಸಮರ | Chikkaballapur |

ಕೊಮುಲ್ ಅಧ್ಯಕ್ಷ ಕೆ ವೈ ನಂಜೇಗೌಡ ಕೊಲಾರ ಚಿಕ್ಕಬಳ್ಳಾಪುರ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ಕೋಲಾರದಿಂದ ಇಬ್ಬಾಗ ಮಾಡಿ ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಪ್ರತ್ಯೇಕಗೊಳಿಸುವ ವಿಚಾರದಲ್ಲಿ ನೀಡಿದ ಹೇಳಿಕೆಗೆ ಉತ್ತರ ನೀಡುವ ಸಲುವಾಗಿ ಇಂದು ನಗರದ ಸಿದ್ದೇಶ್ವರ ಸಮುದಾಯ ಭವನ ಬಿಜೆಪಿ ಕಚೇರಿಯಲ್ಲಿ ಕೊಚಿಮುಲ್ ಮಾಜಿ ಅಧ್ಯಕ್ಷ ಕೆ.ವಿ.ನಾಗಾರಾಜ್ ಮತ್ತು ಜಿಲ್ಲಾದ್ಯಕ್ಷ ರಾಮಲಿಂಗಪ್ಪ ಜಂಟಿ ಪತ್ರಿಕಾಗೋಷ್ಟಿ ನಡೆಸಿ ಕಾಂಗ್ರೆಸ್ ಮುಖಂಡರನ್ನು ತರಾಟೆಗೆ ತೆಗೆದುಕೊಂಡರು. ಕೆ.ವಿ.ನಾಗರಾಜ್ ಮಾತನಾಡಿ, ಕೊಚಿಮುಲ್ ಇಬ್ಭಾಗದಿಂದ ಯಾವುದೆ ತೊಂದರೆಯಾಗೊಲ್ಲ ಬದಲಿಗೆ ನೂರು ಕೋಟಿ ಆಸ್ತಿ ಚಿಕ್ಕಬಳ್ಳಾಪುರಕ್ಕೆ ಸಿಗುತ್ತದೆ. ಚಿಕ್ಕಬಳ್ಳಾಪುರದಲ್ಲಿ ಡೈರಿ ನಡೆಸಲು ಎಲ್ಲಾ ಅನುಕೂಲವಿದೆ. ನಂಜೇಗೌಡ ಪ್ರಸ್ತಾಪಿಸಿರುವಂತೆ ಚಾಮರಾಜ ನಗರದ ಪರಿಸ್ಥಿತಿ ನಮಗೆ ಬರೋಲ್ಲ. ಡಿಸೆಂಬರ್ ವೇಳೆಗೆ ಚಿಕ್ಕಬಳ್ಳಾಪುರ ಪ್ರತ್ಯೇಕ ಡೈರಿಯಾಗುವುದು ಖಚಿತ ಎಂದರು ಇದೇ ವೇಳೆ ಡಿಸಿಸಿ ಬ್ಯಾಂಕ್ ಇಬ್ಬಾಗದ ವಿಷಯವನ್ನು ಪ್ರಸ್ತಾಪಿಸದ ಡಿಸಿಸಿ ಬ್ಯಾಂಕ್ ಮಾಜಿ ಉಪಾದ್ಯಕ್ಷ ಹನುಮೇಗೌಡ ಡಿಸಿಸಿ ಬ್ಯಾಂಕ್ ಇಬ್ಬಾಗಕ್ಕೆ ರ‍್ಬಿಐ ಅನುಮತಿ ಬೇಕಾಗುತ್ತದೆ ಅದಕ್ಕೆ ಹಣಕಾಸು ಸಚಿವೆ ನರ‍್ಮಲಾ ಸೀತಾರಮನ್ ಬಳಿ ನಮ್ಮ ಉಸ್ತುವಾರಿ ಸಚಿವರು ಡಾ.ಕೆ.ಸುಧಾಕರ್ ರ‍್ಚೆ ಮಾಡಿದ್ದು ಬ್ಯಾಂಕ್ ಇಬ್ಬಾಗದ ಪೆÇ್ರಸೆಸ್ ಪ್ರಾರಂಭವಾಗಿದೆ ಎಂದರು. ಎಪಿಎಂಸಿ ಮಾಜಿ ಅಧ್ಯಕ್ಷ ಗೋವಿಂದಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿರುವ ಏಕೈಕ ಬಿಜೆಪಿ ಶಾಸಕ ಡಾ.ಕೆ.ಸುಧಾಕರ್ ಮಾತ್ರ ಡೈರಿ ಇಬ್ಬಾಗ ಬಗ್ಗೆ ಆಸಕ್ತಿ ವಹಿಸಿದ್ದಾರೆ. ಆದ್ರೆ ಜಿಲ್ಲಿಯಲ್ಲಿರಲೋ ಮೂರು ಕಾಂಗ್ರೆಸ್ ಶಾಸಕರು ಮಾತ್ರ ಯಾಕೆ ಮಾತಾಡುತ್ತಿಲ್ಲ ಎಂದು ಪ್ರಶ್ನಿಸಿದರು. ಸುದ್ದಿಗೋಷ್ಟಿಯಲ್ಲಿ ಬಿಜೆಪಿ ಮುಖಂಡರು ಮರಳುಕುಂಟೆ ಕೃಷ್ಣಮರ‍್ತಿ, ಗಂಗರೇಕಾಲುವೆ ಪ್ರಸಾದ್, ಚನ್ನಕೃಷಾ್ಣರೆಡ್ಡಿ, ರಾಮಸ್ವಾಮಿ, ಎಂ ಎಫ್ ಸಿ ನಾರಾಯಣಸ್ವಾಮಿ, ಪಟ್ರೇನಹಳ್ಳಿ ಮೋಹನ್ ಇತರರು ಹಾಜರಿದ್ದರು.