ಹೊಲ ಉಳುಮೆ ಮಾಡಿದ ಸಿ.ಟಿ.ರವಿ
ಚಿಕ್ಕಮಗಳೂರು: ಶಾಸಕ ಸಿ.ಟಿ.ರವಿ ಅವರು ಚೌತಿಯಂದು ಚಿಕ್ಕಮಗಳೂರು ತಾಲೂಕಿನ ಸಗನೀಪುರ ಗ್ರಾಮದಲ್ಲಿ ಹೊಲ ಉಳುಮೆ ಮಾಡಿ ಸುದ್ದಿಯಾಗಿದ್ದಾರೆ.
ಹಿರೇಮಗಳೂರು ಕೆರೆ ಏರಿ ಕಾಮಗಾರಿ ವೀಕ್ಷಣೆಗೆ ಹೋಗಿದ್ದ ರವಿ ಅವರು ಕೆರೆ ವೀಕ್ಷಣೆ ಬಳಿಕ ಹೊಲದಲ್ಲಿದ್ದ ರೈತರ ಕಂಡು ಹೊಲಕ್ಕೆ ಹೋದರು.
ರೈತರಿಂದ ಎತ್ತುಗಳನ್ನ ಪಡೆದು ರೈತರಂತೆ ನೇಗಿಲನ್ನ ಕಾಲಲ್ಲಿ ಒತ್ತಿ ಹೊಲ ಉಳುಮೆ ಮಾಡಿದರು.