ಆಪ್, ಓವೈಸಿ ಪಕ್ಷ ಕೊಟ್ಟ ಹೊಡೆತಕ್ಕೆ ಕಾಂಗ್ರೆಸ್ ಪಲ್ಟಿ

ಆಪ್, ಓವೈಸಿ ಪಕ್ಷ ಕೊಟ್ಟ ಹೊಡೆತಕ್ಕೆ ಕಾಂಗ್ರೆಸ್ ಪಲ್ಟಿ

ಗಾಂಧಿನಗರ: ಆಮ್ ಆದ್ಮಿ ಪಕ್ಷ ಮತ್ತು ಅಸಾದುದ್ದೀನ್ ಓವೈಸಿ ಅವರ ಎಐಎಂಐಎಂ ನೀಡಿದ ಹೊಡೆತದಿಂದ ಕಾಂಗ್ರೆಸ್ಗುಜರಾತ್ ಚುನಾವಣೆಯಲ್ಲಿ ಹೀನಾಯವಾಗಿ ಸೋತಿದೆ.
2017ರ ಚುನಾವಣೆಯಲ್ಲಿ 77 ಸ್ಥಾನಗಳನ್ನು ಪಡೆದಿದ್ದ ಕಾಂಗ್ರೆಸ್ ಈ ಬಾರಿ 20ಕ್ಕಿಂತಲೂ ಕಡಿಮೆ ಸ್ಥಾನ ಪಡೆದಿದೆ.ಮುಸ್ಲಿಂ ಮತದಾರರು ಜಾಸ್ತಿ ಇರುವ 17 ಕ್ಷೇತ್ರಗಳಲ್ಲಿ ಪೈಕಿ ಬಿಜೆಪಿ 12ರಲ್ಲಿ ಜಯ ಪಡೆದರೆ ಕಾಂಗ್ರೆಸ್ 5 ಕ್ಷೇತ್ರಗಳಲ್ಲಿ ಜಯ ಸಾಧಿಸಿದೆ. ಕಳೆದ 10 ವರ್ಷದಿಂದ ದರಿಯಾಪುರ ಕ್ಷೇತ್ರವನ್ನು ಕಾಂಗ್ರೆಸ್ ಗೆದ್ದುಕೊಂಡು ಬರುತ್ತಿತ್ತು. ಆದರೆ ಈ ಬಾರಿ ಬಿಜೆಪಿ ಅಭ್ಯರ್ಥಿ ಕೌಶಿಕ್ ಜೈನ್ ವಿರುದ್ಧ ಗ್ಯಾಸುದ್ದೀನ್ ಶೇಕ್ ಸೋತಿದ್ದಾರೆ.
ಆಮ್ ಆದ್ಮಿ ಮುಸ್ಲಿಮ್ ಪ್ರಾಬಲ್ಯವಿರುವ 16 ಕ್ಷೇತ್ರಗಳಲ್ಲಿ ಸ್ಪರ್ಧಿಸಿದರೆ ಎಐಎಂಐಎಂ 13 ಕಡೆ ಸ್ಪರ್ಧೆ ನಡೆಸಿತ್ತು. ಈ ಎರಡು ಪಕ್ಷಗಳು ಖಾತೆ ತೆರೆಯದೇ ಇದ್ದರೂ ಕಾಂಗ್ರೆಸ್ನ ಮುಸ್ಲಿಮ್ ಮತಗಳನ್ನು ಒಡೆಯುವಲ್ಲಿ ಯಶಸ್ವಿಯಾಗಿದೆ.
ಆಪ್ ಹೆಚ್ಚಾಗಿ ನಗರ ಪ್ರದೇಶಗಳನ್ನೇ ಕೇಂದ್ರಿಕರಿಸಿತ್ತು ಮತ್ತು ಕಾಂಗ್ರೆಸ್ ಕಡಿಮೆ ಅಂತರದಲ್ಲಿ ಗೆದ್ದ ಕ್ಷೇತ್ರಗಳನ್ನು ಟಾರ್ಗೆಟ್ ಮಾಡಿತ್ತು. ಬಿಜೆಪಿ, ಕಾಂಗ್ರೆಸ್ ಬಲಿಷ್ಠವಾಗಿರುವ ಕ್ಷೇತ್ರಗಳನ್ನು ಕೇಂದ್ರಿಕರಿಸದೇ ನೆಪ ಮಾತ್ರಕ್ಕೆ ಸ್ಪರ್ಧೆ ಮಾಡಿತ್ತು. ಅಷ್ಟೇ ಅಲ್ಲದೇ ಬಿಜೆಪಿಗೆ ಕಾಂಗ್ರೆಸ್ ಬದಲು ತಮ್ಮನ್ನು ವಿಪಕ್ಷದಂತೆ ಆಪ್ ಗುರುತಿಸಿಕೊಂಡಿತ್ತು. ಈ ಮೂಲಕ ಬಿಜೆಪಿ ಬದಲಾವಣೆ ಬಯಸುವ ಮತದಾರರನ್ನು ತಲುಪಲು ಆಪ್ ಯತ್ನ ಮಾಡಿತ್ತು.ಬಿಲ್ಕಿಸ್ ಬಾನೋ ಅತ್ಯಾಚಾರ ಪ್ರಕರಣದಲ್ಲಿ 11 ಅಪರಾಧಿಗಳನ್ನು ಬಿಡುಗಡೆ ಮಾಡಿದ್ದು ರಾಷ್ಟ್ರವ್ಯಾಪಿ ಸುದ್ದಿಯಾಗಿತ್ತು. ಅಪರಾಧಿಗಳನ್ನು ಹೂಮಾಲೆ ಹಾಕಿ ಹಿಂದೂ ಸಂಘಟನೆ ಸ್ವಾಗತ ಮಾಡಿತ್ತು. ಅಪರಾಧಿಗಳ ಬಿಡುಗಡೆ ವಿಚಾರದಲ್ಲಿ ಪ್ರಮುಖ ಪಾತ್ರ ವಹಿಸಿ “ಸಂಸ್ಕಾರಿ ಬ್ರಾಹ್ಮಣರು” ಎಂದು ಬಣ್ಣಿಸಿದ್ದ ಬಿಜೆಪಿ ನಾಯಕ ಚಂದ್ರಸಿನ್ಹಾ ರೌಲ್ಜಿ ಗೋಧ್ರಾದಲ್ಲಿ ಮುನ್ನಡೆಯಲಿದ್ದಾರೆ. ಈ ಕ್ಷೇತ್ರದಿಂದ 6 ಬಾರಿ ರೌಲ್ಜಿ ಗೆದ್ದಿದ್ದಾರೆ.