ಕೆ ಆರ್ ಪುರಂ ವ್ಯಾಪ್ತಿಯಲ್ಲಿ ತೆರವು ಕಾರ್ಯಾಚರಣೆ ಚಾಪ್ಟರ್ 2 ಪ್ರಾರಂಭ

ಕೆ ಆರ್ ಪುರಂ ವ್ಯಾಪ್ತಿಯಲ್ಲಿ ತೆರವು ಕಾರ್ಯಾಚರಣೆ ಚಾಪ್ಟರ್ 2 ಪ್ರಾರಂಭ

ಬೆಂಗಳೂರು: ರಾಜಧಾನಿ ಬೆಂಗಳೂರಿನ ಕೆ.ಆರ್‌ಪುರಂನ ಗಾಯತ್ರಿ ಲೇಔನಲ್ಲಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯ ಮುಂದುವರಿದಿದೆ. 10ನೇ ಕ್ರಾಸ್‌ನಲ್ಲಿರುವ 2 ಮನೆಗಳನ್ನು ಡೆಮಾಲಿಷನ್‌ ಮಾಡಲಾಗಿದೆ. ರಾಜಕಾಲುವೆ ಪಕ್ಕದಲ್ಲಿ ನಿರ್ಮಾಣವಾಗಿದ್ದ ಕಟ್ಟಡ ತೆರವು ಮಾಡಲಾಗಿದೆ.

ಇದರ ಹೊರತಾಗಿ ಪೂರ್ವ ಪಾರ್ಕ್ರಿಡ್ಜ್ ನ ಮೂರು ವಿಲ್ಲಾಗಳು, ರೈನ್ ಬೋ ಲೇಔಟ್ ನ 30 ವಿಲ್ಲಾಗಳು ಡೆಮಾಲಿಷನ್ ಗೆ ಫಿಕ್ಸ್ ಆಗಿ ನಿಂತಿವೆ. ರಾಜಕಾಲುವೆ ಒತ್ತುವರಿ ಮಾಡಿಕೊಂಡಿರುವ ಇಕೋಸ್ಪೇಸ್​ ಕಂಪನಿಯ ಒತ್ತುವರಿ ಜಾಗ ತೆರವು ಮಾಡಲು ಅಧಿಕಾರಿಗಳಿಗೆ ಫ್ರೀಹ್ಯಾಂಡ್ ನೀಡಲಾಗಿದೆ. ಇದರೊಂದಿಗೆ ಇಕೋಸ್ಪೇಸ್​ ಒಳಗಿರುವ 12 ಅಂತಸ್ತಿನ 2 ಕಟ್ಟಡ ತೆರವು ನಿಶ್ಚಿತವಾಗಿದೆ. ಸಾವಳಕೆರೆಯಿಂದ ಬೆಳ್ಳಂದೂರು ಕೆರೆಗೆ ಸಂಪರ್ಕ ಸಲ್ಲಿಸುರಾಜಕಾಲುವೆ ಒತ್ತುವರಿ ವಿಚಾರ ಸಂಬಂಧ ಮಾತನಾಡಿದ ಬಿಬಿಎಂಪಿ ಮುಖ್ಯ ಇಂಜಿನಿಯರ್ ಬಸವರಾಜ ಕಬಾಡೆ, ಇಂದು ಕಾಂಪೌಡ್ ವಾಲ್, ಖಾಲಿಜಾಗ, ಶೆಡ್ ಮಾತ್ರ ತೆರವು ಮಾಡುತ್ತೇವೆ. ದೊಡ್ಡ ಸ್ಟ್ರಕ್ಚರ್​ಗಳಿಗೆ ಸ್ಟೇ ಆರ್ಡರ್ ಇದೆ. ಹೀಗಾಗಿ ತಹಶೀಲ್ದಾರ್ ನೋಟಿಸ್ ಕೊಟ್ಟು ರಿ ಸರ್ವೆ ಆಗಬೇಕು. ಇದಕ್ಕೆ ಎರಡರಿಂದ ಮೂರು ದಿನ ಹಿಡಿಯಬಹುದು. ತಹಶೀಲ್ದಾರ್ ನಮಗೆ ಆದೇಶ ನೀಡಿದ ತಕ್ಷಣ ದೊಡ್ಡ ಕಟ್ಟಡಗಳನ್ನೂ ತೆರವು ಮಾಡುತ್ತೇವೆ. ಇದಕ್ಕೆ ಮೂರು ದಿನಗಳಾಗಬಹುದು. ಅದು ಬಿಟ್ಟು ನಾವು ಏಕಾಏಕಿ ಒಡೆದುಹಾಕಲು ಸಾಧ್ಯವಿಲ್ಲ. ಇವತ್ತು ನಾಳೆ ಎಲ್ಲೆಲ್ಲಿ ಅಡ್ಡಿ ಇಲ್ಲವೋ ಅಲ್ಲೆಲ್ಲಾ ತೆರವು ಮಾಡುತ್ತೇವೆ ಎಂದು ಹೇಳಿದ್ದಾರೆ.ವ ರಾಜಕಾಲುವೆ ಮಾರ್ಗದಲ್ಲಿ500 ಮೀಟರ್​ ಉದ್ದ, 40-50 ಅಡಿ ಅಗಲದ ಜಾಗ ಒತ್ತುವರಿಯಾಗಿದೆ.