ಭಾರತದಲ್ಲಿ ಇದುವರೆಗಿನ ಎಲೆಕ್ಟ್ರಿಕ್‌ ಕಾರುಗಳಲ್ಲೇ ಅತಿ ಹೆಚ್ಚಿನ ದೂರ ಕ್ರಮಿಸುವ ಸಾಮರ್ಥ್ಯವುಳ್ಳ ಕಾರು ಬಿಡುಗಡೆಗೊಳಿಸಿದ ಮರ್ಸಿಡೀಸ್‌

ಭಾರತದಲ್ಲಿ ಇದುವರೆಗಿನ ಎಲೆಕ್ಟ್ರಿಕ್‌ ಕಾರುಗಳಲ್ಲೇ ಅತಿ ಹೆಚ್ಚಿನ ದೂರ ಕ್ರಮಿಸುವ ಸಾಮರ್ಥ್ಯವುಳ್ಳ ಕಾರು ಬಿಡುಗಡೆಗೊಳಿಸಿದ ಮರ್ಸಿಡೀಸ್‌

ಭಾರತದಲ್ಲಿ ಇದುವರೆಗಿನ ಎಲೆಕ್ಟ್ರಿಕ್‌ ಕಾರುಗಳಲ್ಲೇ ಅತಿ ಹೆಚ್ಚಿನ ದೂರ ಕ್ರಮಿಸುವ ಸಾಮರ್ಥ್ಯವುಳ್ಳ ಎಲೆಕ್ಟ್ರಿಕ್‌ ಕಾರನ್ನು ಪ್ರಸಿದ್ಧ ಲಕ್ಸುರಿ ಕಾರ್‌ ತಯಾರಕ ಮರ್ಸಿಡೀಸ್‌ ಬೆಂಜ್‌ ಬಿಡುಗಡೆಗೊಳಿಸಿದೆ.

ಎಂಬ ಹೆಸರಿನ ಈ ಕಾರು ಇದಿವರೆಗಿನ ಎಲೆಕ್ಟ್ರಿಕ್‌ ಕಾರುಗಳಲ್ಲೇ ಅತಿ ಹೆಚ್ಚು ದೂರ ಕ್ರಮಿಸಬಲ್ಲ ಸಾಮರ್ಥ್ಯ ಹೊಂದಿದ್ದು ಪ್ರತಿ ಚಾರ್ಜ್‌ ಗೆ 857 ಕಿಮಿ ದೂರವನ್ನು ಇದು ಕ್ರಮಿಸಬಲ್ಲುದು. ಇದು 107.8 kWh ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್‌ ಹೊಂದಿದ್ದು ಕಂಪನಿಯ ಪ್ರಕಾರ, ವಿಶ್ವದ ಅತ್ಯಂತ ಹೆಚ್ಚಿನ ಏರೋಡೈನಾಮಿಕ್ ಕಾರು ಎನ್ನಲಾಗಿದೆ.

ಇದು 523 ಅಶ್ವಶಕ್ತಿಯ ಪವರ್ ಔಟ್‌ಪುಟ್ ಸಾಮರ್ಥ್ಯ ಹೊಂದಿದ್ದು 855 Nm ಟಾರ್ಕ್ ಅನ್ನು ಹೊಂದಿದೆ. 4.3 ಸೆಕೆಂಡುಗಳಲ್ಲಿ 0-100 km/h ವೇಗ ಪಡೆಯಬಲ್ಲುದಾಗಿದ್ದು 210 km/h ಗರಿಷ್ಠ ವೇಗವನ್ನು ತಲುಪುವ ಸಾಮರ್ಥ್ಯವನ್ನು ಹೊಂದಿದೆ. ಹೆಚ್ಚುವರಿಯಾಗಿ, ಕಾರು 200 kW ವರೆಗಿನ ಚಾರ್ಜಿಂಗ್ ವೇಗವನ್ನು ಸಹ ಬೆಂಬಲಿಸುತ್ತದೆ.

ಇತರ ವೈಶಿಷ್ಟ್ಯಗಳಾಗಿ 3d ನಕ್ಷೆಗಳು, ಮುಂಭಾಗದ ಪ್ರಯಾಣಿಕರಿಗೆ ಮಸಾಜ್ ಆಸನಗಳು, ಹಿಂಭಾಗದ ಪ್ರಯಾಣಿಕರಿಗೆ ಟ್ಯಾಬ್ಲೆಟ್, ಏರ್ ಫಿಲ್ಟರ್ ಮತ್ತು ಹೆಡ್ಸ್-ಅಪ್ ಡಿಸ್ಪ್ಲೇ. ಒಂಬತ್ತು ಏರ್‌ಬ್ಯಾಗ್‌ಗಳು, ಆಟೋ ಎಮರ್ಜೆನ್ಸಿ ಸ್ಟಾಪ್ ಸಿಸ್ಟಂ, ಲೇನ್-ಚೇಂಜ್ ಮತ್ತು ಲೇನ್-ಕೀಪ್ ಅಸಿಸ್ಟ್, ಹೊಂದಿದ್ದು ಯುರೋ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್ ನಲ್ಲಿ 5 ಸ್ಟಾರ್‌ ರೇಟಿಂಗ್‌ ಹೊಂದಿದೆ.