ಇಂದು ರಕ್ಷಾ ಬಂಧನ: ಪ್ರಧಾನಿ, ಮುಖ್ಯಮಂತ್ರಿಯಿಂದ ಶುಭಾಶಯ

ಇಂದು ರಕ್ಷಾ ಬಂಧನ: ಪ್ರಧಾನಿ, ಮುಖ್ಯಮಂತ್ರಿಯಿಂದ ಶುಭಾಶಯ

ನವದೆಹಲಿ: ದೇಶದಾದ್ಯಂತ ಇಂದು ಜನರು ಅಣ್ಣ-ತಂಗಿಯರ ಪವಿತ್ರ ಹಬ್ಬವಾದ ರಕ್ಷಾ ಬಂಧನದ ಸಂಭ್ರಮದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಶುಭಾಶಯ ಕೋರಿದ್ದಾರೆ.

'ರಕ್ಷಾ ಬಂಧನದ ಪವಿತ್ರ ಹಬ್ಬದಂದು ಎಲ್ಲಾ ದೇಶವಾಸಿಗಳಿಗೆ ಶುಭಾಶಯಗಳು' ಎಂದು ಪ್ರಧಾನಿ ಟ್ವೀಟ್‌ ಮೂಲಕ ಶುಭಾಶಯ ಕೋರಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ, 'ಜನತೆಗೆ ರಕ್ಷಾಬಂಧನದ ಪವಿತ್ರ ಹಬ್ಬದಂದು ಎಲ್ಲಾ ದೇಶವಾಸಿಗಳಿಗೆ ಹೃತ್ಪೂರ್ವಕ ಶುಭಾಶಯಗಳು' ಎಂದು ತಿಳಿಸಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿ, 'ನಾಡಿನ ಸಮಸ್ತ ಜನತೆಗೆ ರಕ್ಷಾ ಬಂಧನದ ಹಾರ್ದಿಕ ಶುಭಾಶಯಗಳು. ಸಹೋದರ ಸಹೋದರಿಯರ ಬಾಂಧವ್ಯದ ಸಂಕೇತವಾಗಿರುವ, ಭ್ರಾತೃತ್ವದ ಸಂಭ್ರಮಾಚರಣೆಯಾಗಿರುವ ರಕ್ಷಾ ಬಂಧನ ಎಲ್ಲರ ಸುಖ ಸಂತೋಷಗಳನ್ನು ನೂರ್ಮಡಿಗೊಳಿಸಲಿ' ಎಂದು ಹಾರೈಸುತ್ತೇನೆ ಎಂದು ಹೇಳಿದ್ದಾರೆ.