ಶಿಕ್ಷಕನಿಂದ ವಿದ್ಯಾರ್ಥಿ ಕೊಲೆ ಕೇಸ್ಗೆ ಟ್ವಿಸ್ಟ್; ಹತ್ಯೆ ಹಿಂದೆ ತ್ರಿಕೋನ ಪ್ರೇಮಕಥೆ
ಗದಗ ಜಿಲ್ಲೆಯ ನರಗುಂದ ತಾಲೂಕಿನ ಹದ್ಲಿ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಅತಿಥಿ ಶಿಕ್ಷಕನಾಗಿ ಮುತ್ತಪ್ಪ ಕೆಲಸ ಮಾಡುತ್ತಿದ್ದನು. ಅಲ್ಲಿಯೇ ಕೆಲಸ ಮಾಡುತ್ತಿದ್ದ ಗೀತಾ ಅವರ ಮೇಲೆ ಮುತ್ತಪ್ಪನಿಗೆ ಪ್ರೇಮಾಂಕುರವಾಗಿತ್ತು. ಇಬ್ಬರು ಪ್ರತಿನಿತ್ಯ ಸಲುಗೆಯಿಂದಲೇ ಇರುತ್ತಿದ್ದರು. ಮೆಸೇಜ್, ಫೋನ್ನಲ್ಲಿ ಮಾತನಾಡೋದು ಜೋರಾಗಿತ್ತು.
ಮತ್ತೋರ್ವನ ಜೊತೆ ಸಲುಗೆಯಿಂದ ಇದ್ದ ಗೀತಾ
ಕೆಲವು ದಿನಗಳ ಹಿಂದೆ ಶಾಲೆಯಿಂದ ಶೈಕ್ಷಣಿಕ ಪ್ರವಾಸಕ್ಕೆ ಹೋಗಲಾಗಿತ್ತು. ಪ್ರವಾಸದ ವೇಳೆ ಶಾಲೆಯ ಮತ್ತೋರ್ವ ಸಹ ಶಿಕ್ಷಕ ಸಂಗನಗೌಡ ಎಂಬವರ ಜೊತೆ ಸಲುಗೆಯಿಂದ ಇರೋದನ್ನು ಮುತ್ತಪ್ಪ ಗಮನಿಸಿದ್ದಾನೆ. ಗೀತಾ ನಡೆಯಿಂದ ಮುತ್ತಪ್ಪ ಕೋಪಗೊಂಡಿದ್ದನು.
ಇದರಿಂದ ಕೋಪಗೊಂಡ ಮುತ್ತಪ್ಪ ಶಾಲೆಗೆ ಬಂದು ಗೀತಾಳ ಮಗ ಭರತನಿಗೆ ಜೋರಾಗಿ ಹೊಡೆದಿದ್ದಾನೆ. ನಂತರ ತರಗತಿಯಿಂದ ಹೊರಗೆ ಕರೆದುಕೊಂಡು ಬಂದು ಮೊದಲ ಮಹಡಿಯಿಂದ ಎಸೆದು ಕೊಲೆ ಮಾಡಿದ್ದಾನೆ.