ಹಸುವಿಗೆ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದ ನೂರ್ ಮೊಹಮ್ಮದ್

ಇಂದು ಬೆಳಗಿನ ಜಾವ ಬಳ್ಳಾರಿಯ ನಗರದ ವಡ್ಡರ ಮಂಡೆ ಮುಖ್ಯರಸ್ತೆಯಲ್ಲಿರುವ ಎರಡು ಹಸುವಿನ ಮಧ್ಯೆ ಗುದ್ದಾಟ ನಡೆದ ಪರಿಣಾಮ ಒಂದು ಸಹಸುವಿನ ಕಾಲಿಗೆ ಗಂಭೀರ ಗಾಯವಾಗಿದೆ. ಮಹಾನಗರಪಾಲಿಕೆಯ 15ನೇ ವಾರ್ಡಿನ ಸದಸ್ಯ ನೂರ್ ಮೊಹಮ್ಮದ್ ಹಸುವಿಗೆ ತಕ್ಷಣ ಚಿಕಿತ್ಸೆಗಾಗಿ ಲಗೇಜ್ ಆಟೋ ಮುಖಾಂತರ ಆಸ್ಪತ್ರೆಗೆ ಕರೆದುಕೊಂಡು ಹೋಗಿ ತಕ್ಷಣ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದಿದ್ದಾರೆ. ಸದ್ಯ ಹಸು ಪ್ರಾಣಾಪಾಯದಿಂದ ಪಾರಾಗಿದ್ದು, ಈ ಮೂಲಕ ವಾರ್ಡಿನ ಸದಸ್ಯರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ನಮ್ಮ ಮಹಾನಗರ ಪಾಲಿಕೆಯ ಸದಸ್ಯರು ನೂರು ಮಹಮ್ಮದ್.