ಐಪಿಎಲ್ ಹರಾಜಿಗೂ ಮುನ್ನ ಪಾಕಿಸ್ತಾನದ ಗಿಮಿಕ್

ಐಪಿಎಲ್ ಹರಾಜಿಗೂ ಮುನ್ನ ಪಾಕಿಸ್ತಾನದ ಗಿಮಿಕ್

ಐಪಿಎಲ್ ಹರಾಜಿಗೂ ಮುನ್ನ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಮತ್ತೊಂದು ಸಂಚಲನ ಮೂಡಿಸಿದೆ. ಪಾಕಿಸ್ತಾನ ಸೂಪರ್ ಲೀಗ್ ಎಂಟನೇ ಸೀಸನ್‌ಗಾಗಿ ಆಟಗಾರರ ಡ್ರಾಫ್ಟ್ ಸಿದ್ಧಪಡಿಸಿದೆ. ಪಿಎಸ್‌ಎಲ್‌ಗಾಗಿ ಸಿದ್ಧಪಡಿಸಲಾದ ಈ ಡ್ರಾಫ್ಟ್​ನಲ್ಲಿ 500 ಆಟಗಾರರನ್ನು ಸೇರಿಸಲಾಗಿದೆ. ಈ ಆಟಗಾರರಲ್ಲಿ ಆರನ್ ಫಿಂಚ್, ಮ್ಯಾಥ್ಯೂ ವೇಡ್, ಮೊಯಿನ್ ಅಲಿ, ವನಿಂದು ಹಸರಂಗ, ಕೀರಾನ್ ಪೊಲಾರ್ಡ್, ಮಾರ್ಟಿನ್ ಗಪ್ಟಿಲ್ ಕೂಡ ಸೇರಿದ್ದಾರೆ. IPL ಆರಂಭವಾಗುವುದಕ್ಕೂ ಮುನ್ನ PSL ಮುಕ್ತಾಯವಾಗುವುದರಿಂದ ಎಲ್ಲಾ ವಿದೇಶಿ ಆಟಗಾರರು ಐಪಿಎಲ್​ಗೆ ಲಭ್ಯರಾಗಲಿದ್ದಾರೆ.