ವೈ​ಎಸ್ಆರ್‌​ ಕಾಂಗ್ರೆಸ್-ಟಿಡಿಪಿ ಕಾರ್ಯಕರ್ತರ ಮಾರಾಮಾರಿ

ವೈ​ಎಸ್ಆರ್‌​ ಕಾಂಗ್ರೆಸ್-ಟಿಡಿಪಿ ಕಾರ್ಯಕರ್ತರ ಮಾರಾಮಾರಿ

ವೈ​ಎಸ್‌ ಆರ್‌​ ಕಾಂಗ್ರೆಸ್​ ಮತ್ತು ಟಿಡಿಪಿ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದು ಗಾಜಿನ ಬಾಟಲಿಗಳು, ಕಲ್ಲು, ದೊಣ್ಣೆಗಳಿಂದ ದಾಳಿ ಮಾಡಿರುವ ಘಟನೆ ಆಂಧ್ರಪ್ರದೇಶದ ಪಲ್ನಾಡು ಜಿಲ್ಲೆಯ ಮಾಚರ್ಲದಲ್ಲಿ ನಡೆದಿದೆ. ಟಿಡಿಪಿ ಕಾರ್ಯಾಲಯಕ್ಕೆ ಬೆಂಕಿ ಹಚ್ಚಲಾಗಿದೆ. ಮಾಚರ್ಲ ತಾಲೂಕು ಪಂಚಾಯತ್ ಪ್ರಭಾರಿ ಜೂಲಕಾಂತಿ ಬ್ರಹ್ಮಾರೆಡ್ಡಿ ನೇತೃತ್ವದಲ್ಲಿ ಪುರಸಭೆ ಕಚೇರಿ ಬಳಿ ಕಾರ್ಯಕ್ರಮವೊಂದನ್ನು ಆಯೋಜಿಸಲಾಗುತ್ತಿತ್ತು. ಈ ವೇಳೆ ಎರಡೂ ಪಕ್ಷಗಳ ಕಾರ್ಯಕರ್ತರು ಹೊಡೆದಾಡಿಕೊಂಡಿದ್ದಾರೆ.