ಮಲೇಷ್ಯಾ ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 22ಕ್ಕೆ ಏರಿಕೆ

ಮಲೇಷ್ಯಾದ ರಜಾ ಶಿಬಿರದ ಮೇಲೆ ಶುಕ್ರವಾರ ಭೂಕುಸಿತ ಸಂಭವಿಸಿದ್ದು ಘಟನೆಯಲ್ಲಿ ಮೃತಪಟ್ಟವರ ಸಾವಿನ ಸಂಖ್ಯೆ 22ಕ್ಕೆ ಏರಿಕೆಯಾಗಿದೆ. ಕೌಲಾಲಂಪುರದ ಹೊರವಲಯದಲ್ಲಿರುವ ಸೆಲಂಗೋರ್ ರಾಜ್ಯದಲ್ಲಿ ರಜಾ ಶಿಬಿರದ ಮೇಲೆ ಶುಕ್ರವಾರ ಬೆಳಗ್ಗೆ 3 ಗಂಟೆ ಸುಮಾರಿಗೆ ಸಂಭವಿಸಿದ ಭೂ ಕುಸಿತ ಸಂದರ್ಭದಲ್ಲಿ ಕುಟುಂಬಗಳು ತಮ್ಮ ತಮ್ಮ ಟೆಂಟ್ಗಳಲ್ಲಿ ನಿದ್ರೆಯಲ್ಲಿದ್ದವು. 90ಕ್ಕೂ ಹೆಚ್ಚು ಜನರು ಭೂ ಕುಸಿತದ ಭೀಕರತೆಗೆ ಸಾಕ್ಷಿಯಾಗಿದ್ದು ಈ ಪೈಕಿ 22 ಮಂದಿ ಮೃತಪಟ್ಟಿರುವುದು ದೃಢಪಟ್ಟಿದೆ.