ಇದೆಂಥಾ ವಿಚಿತ್ರ..! ಭೇಟೆಗೆ ತೆರಳುತ್ತಿದ್ದಾಗ ವ್ಯಕ್ತಿಗೆ 'ಗುಂಡು ಹಾರಿಸಿ ಕೊಂದ ನಾಯಿ'

ಅಮೇರಿಕಾ : ನಾಯಿಗಳ ವಿಚಾರದಲ್ಲಿ ಎಷ್ಟೇ ಜಾಗರುಕರಾಗಿದ್ದರು ಸಾಲದು ಅನ್ನೋದರಲ್ಲಿ ತಪ್ಪೇನಿಲ್ಲ.. ಯಾಕೆಂದ್ರೆ ಭೇಟೆಗೆ ತೆರಳುತ್ತಿದ್ದಾಗ ವ್ಯಕ್ತಿಗೆ ಗುಂಡು ಹಾರಿಸಿ ಸಾಕು ನಾಯಿಯೇ ಸಾಯಿಸಿದ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ.
ವ್ಯಕ್ತಿಯೊಬ್ಬ ಪ್ರಾಣಿಗಳ ಭೇಟಿಗಾಗಿ ತೆರಳಿದ ಸಂದರ್ಭದಲ್ಲಿ ತಮ್ಮ ಸಾಕು ನಾಯಿಯನ್ನು ಪಕ್ಕದ ಸೀಟಿನಲ್ಲೇ ಕೂರಿಸಿಕೊಂಡಿನು.
ನಾಯಿ ಆಕಸ್ಮಿಕವಾಗಿ ಹಿಂದಿನ ಸೀಟಿನಲ್ಲಿ ಬಂದೂಕನ್ನು ತುಳಿದು ಗುಂಡು ಹಾರಿಸಿದೆ. ಮುಂದಿನ ಸೀಟಿನಲ್ಲಿ ಕುಳಿತಿದ್ದ ಯುವಕನ ಬೆನ್ನಿಗೆ ನೇರವಾಗಿ ಗುಂಡು ತಗುಲಿ ಸಾವನ್ನಪ್ಪಿದ್ದಾನೆ. ಈ ಘಟನೆ ಸಂಬಂಧ ಪೊಲೀಸರು ತೀವ್ರ ಶೋಧ ಕಾರ್ಯ ನಡೆಸಿದ್ದಾರೆ.
ಈ ಹಿಂದೆ 2018 ರಲ್ಲಿ ಮೆಕ್ಸಿಕೋದಲ್ಲಿ ಇದೇ ರೀತಿಯ ಘಟನೆ ನಡೆದಿತ್ತು. ಬೇಟೆಯಾಡಲು ಹೊರಟಿದ್ದ ಮುದ್ದಿನ ನಾಯಿ ಆಕಸ್ಮಿಕವಾಗಿ ಬೆನ್ನಿಗೆ ಗುಂಡು ಹಾರಿಸಿದ್ದರಿಂದ ಮಾಲೀಕ ಮೃತಪಟ್ಟಿದ್ದನು