ಸಚಿವ ಸೋಮಣ್ಣ ಮನೆಗೆ ಎಂಟ್ರಿ ಕೊಟ್ಟ ರೌಡಿಶೀಟರ್ ನಾಗ

ಬೆಂಗಳೂರು: ಬಿಜೆಪಿ ಕಾರ್ಯಕ್ರಮವೊಂದರಲ್ಲಿ ರೌಡಿಶೀಟರ್ ಸುನಿಲ್ ಕಾಣಿಸಿಕೊಂಡಿದ್ದು, ತೀವ್ರ ಚರ್ಚೆಗೆ ಕಾರಣವಾಗಿದೆ. ಇದೀಗ ವಸತಿ ಸಚಿವ ವಿ.ಸೋಮಣ್ಣ ಮನೆಗೆ ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗ ಭೇಟಿ ಮಾಡಿದ್ದು, ಕುತೂಹಲ ಮೂಡಿಸಿದೆ. ಸೋಮಣ್ಣ ನಿವಾಸಕ್ಕೆ ನಾಗ ತನ್ನ ಗ್ಯಾಂಗ್ 40-50 ಜನ ಹುಡುಗರ ಜೊತೆ ಭೇಟಿ ನೀಡಿದ್ದಾರೆ. ಸೋಮಣ್ಣ ಮನೆಗೆ ಭೇಟಿ ನೀಡಿರುವ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತ CCB ಆರೋಪಿ ನಾಗನನ್ನು ಕರೆತಂದು ವಿಚಾರಣೆ ನಡೆಸಿದ್ದಾರೆ.