ಅಪಘಾತದ ನಂತರ ಪಂತ್‌ ಮೊದಲ ಪೋಸ್ಟ್‌: ಕಾಪಾಡಿದವರ ಚಿತ್ರ ಹಂಚಿಕೊಂಡ ಕ್ರಿಕೆಟರ್‌

ಅಪಘಾತದ ನಂತರ ಪಂತ್‌ ಮೊದಲ ಪೋಸ್ಟ್‌: ಕಾಪಾಡಿದವರ ಚಿತ್ರ ಹಂಚಿಕೊಂಡ ಕ್ರಿಕೆಟರ್‌

ವದೆಹಲಿ: ಅಪಘಾತದ ನಂತರ ಇದೇ ಮೊದಲ ಬಾರಿಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಪ್ರಕಟಿಸಿರುವ ಕ್ರಿಕೆಟರ್‌ ರಿಷಭ್‌ ಪಂತ್‌ 'ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ ಮತ್ತು ಚೇತರಿಕೆಯ ಹಾದಿಯಲ್ಲಿದ್ದೇನೆ' ಎಂದು ಹೇಳಿದ್ದಾರೆ.

'ನನ್ನ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ ಎಂದು ಎಲ್ಲರಿಗೂ ತಿಳಿಸಲು ಬಯಸುತ್ತೇನೆ. ನಾನೀಗ ಚೇತರಿಕೆಯ ಹಾದಿಯಲ್ಲಿದ್ದೇನೆ. ನಿಮ್ಮೆಲ್ಲರ ಹಾರೈಕೆಗಾಗಿ ನಾನು ಕೃತಜ್ಞನಾಗಿದ್ದೇನೆ. ನನ್ನ ಉತ್ಸಾಹವೂ ಹೆಚ್ಚಿದೆ. ನಾನು ಪ್ರತಿದಿನ ಉತ್ತಮವಾಗುತ್ತಿದ್ದೇನೆ. ಈ ಕಷ್ಟದ ಸಮಯದಲ್ಲಿ ಸಿಕ್ಕ ನಿಮ್ಮ ಪ್ರೀತಿಯ ಮಾತುಗಳು, ಬೆಂಬಲಕ್ಕಾಗಿ ನಾನು ನಿಮ್ಮೆಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸಲು ಬಯಸುತ್ತೇನೆ' ಎಂದು ಅವರು ಇನ್‌ಸ್ಟಾಗ್ರಾಂನ ಪೋಸ್ಟ್‌ನಲ್ಲಿ ಹೇಳಿದ್ದಾರೆ.ಇದರೊಂದಿಗೆ ಸ್ಪೈಡರ್‌ಮ್ಯಾನ್‌ನ ಗೊಂಬೆಯೊಂದನ್ನು ಸ್ಟೇಟಸ್‌ನಲ್ಲಿ ಹಾಕಿಕೊಂಡಿರುವ ರಿಷಭ್‌,  ಎಂದು ಬರೆದಿದ್ದಾರೆ.