ಕೋವಿಡ್ ಲಸಿಕೆ ʻಕೋವೊವ್ಯಾಕ್ಸ್ʼ ಮಾರಾಟಕ್ಕೆ ಡಿಸಿಜಿಐ ಅನುಮತಿ|
ನವದೆಹಲಿ: ಕೋವಿಶೀಲ್ಡ್ ಅಥವಾ ಕೋವಾಕ್ಸಿನ್ನ ಎರಡು ಡೋಸ್ಗಳನ್ನು ಪಡೆದ ವಯಸ್ಕರಿಗೆ ಬೂಸ್ಟರ್ ಡೋಸ್ ಆಗಿ ಸೀರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಕೋವಿಡ್-19 ಲಸಿಕೆ ಕೋವೊವ್ಯಾಕ್ಸ್(Covovax) ಅನ್ನು ಬಳಕೆ ಮಾಡಲು ಭಾರತದ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (DCGI) ಅನುಮತಿ ನೀಡಿದೆ ಎಂದು ಮೂಲಗಳು ತಿಳಿಸಿವೆ.
ಅಧಿಕಾರಿಗಳ ಪ್ರಕಾರ, ಬುಧವಾರ ನಡೆದ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (ಸಿಡಿಎಸ್ಸಿಒ)ದ ವಿಷಯ ತಜ್ಞರ ಸಮಿತಿ (ಎಸ್ಇಸಿ) ಸಭೆಯಲ್ಲಿ ಈ ವಿಷಯ ಚರ್ಚಿಸಲಾಗಿದೆ. ಕೋವಿಶೀಲ್ಡ್ ಅಥವಾ ಕೋವಾಕ್ಸಿನ್ನ ಎರಡು ಡೋಸ್ಗಳನ್ನು ಪಡೆದ ವಯಸ್ಕರಿಗೆ ಕೋವೊವ್ಯಾಕ್ಸ್ ಅನ್ನು ಬೂಸ್ಟರ್ ಡೋಸ್ನಂತೆ ಮಾರುಕಟ್ಟೆ ದೃಢೀಕರಣಕ್ಕಾಗಿ ಅವರು ಶಿಫಾರಸು ಮಾಡಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (ಸಿಡಿಎಸ್ಸಿಒ) ವಿಷಯ ತಜ್ಞರ ಸಮಿತಿಯು ಶಿಫಾರಸು ಮಾಡಿದ ನಂತ್ರ, ಡಿಸಿಜಿಐ ಇದಕ್ಕೆ ಅನುಮೋದನೆ ನೀಡಿದೆ. ಸೀರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ (SII) ಸರ್ಕಾರ ಮತ್ತು ನಿಯಂತ್ರಕ ವ್ಯವಹಾರಗಳ ನಿರ್ದೇಶಕರಾದ ಪ್ರಕಾಶ್ ಕುಮಾರ್ ಸಿಂಗ್ ಅವರು ಕೋವಿಡ್-19 ಸಾಂಕ್ರಾಮಿಕ ರೋಗವನ್ನು ಗಮನದಲ್ಲಿಟ್ಟುಕೊಂಡು ಇತ್ತೀಚೆಗೆ 18 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಕೋವೊವ್ಯಾಕ್ಸ್ ಬೂಸ್ಟರ್ ಡೋಸ್ಗಳ ಅನುಮೋದನೆಗಾಗಿ ಡಿಸಿಜಿಐಗೆ ಪತ್ರ ಬರೆದಿದ್ದರು ಎಂದು ಅಧಿಕೃತ ಮೂಲಗಳು ತಿಳಿಸಿವೆ.