ಎಂಇಎಸ್ ಪುಂಡರ ಗಲಾಟೆ: ವಿಜಯಪುರದಿಂದ ಮಹಾರಾಷ್ಟ್ರಕ್ಕೆ ಸಾರಿಗೆ ಬಸ್ ಸಂಚಾರ ಸ್ಥಗಿತ
ವಿಜಯಪುರ: ಕನ್ನಡ ಧ್ವಜ ಸುಟ್ಟು, ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಭಗ್ನಗೊಳಿಸಿದ ಎಂಇಎಸ್ ಮತ್ತು ಶಿವಸೇನೆ ಕಾರ್ಯಕರ್ತರ ವಿರುದ್ಧ ಕನ್ನಡಿಗರು ಹೋರಾಟದ ಕಹಳೆ ಮೊಳಗಿಸಿದ್ದಾರೆ. ಅತ್ತ ಶಿವಸೇನೆ ಮತ್ತು ಎಂಇಎಸ್ ಪುಂಡರ ಗಲಾಟೆ ಹೆಚ್ಚುತ್ತಲೇ ಇದ್ದು, ಮಹಾರಾಷ್ಟ್ರದಲ್ಲಿ ಕರ್ನಾಟಕದ ವಾಹನಗಳಿಗೆ ಹಾನಿ ಮಾಡುತ್ತಲೇ ಇದ್ದಾರೆ.
ನೆರೆಯ ಮಹಾರಾಷ್ಟ್ರದಲ್ಲಿ ಕನ್ನಡಿಗರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಎಂಇಎಸ್ ಹಾಗೂ ಶಿವಸೇನೆ ಪುಂಡಾಟ ಮೆರೆಯುತ್ತಿದ್ದು, ಕರ್ನಾಟಕದ ಬಸ್ಗಳ ಮೇಲೆ ಕಲ್ಲು ತೂರುತ್ತಾ, ಬಸ್ನ ಮೇಲೆ ಮರಾಠಿ ಲಿಪಿ ಬರೆಯುತ್ತಿದ್ದಾರೆ. ಬಸ್ ಚಾಲಕರಿಗೆ ಬೆದರಿಕೆ ಹಾಕಿ ಬಲವಂತವಾಗಿ ಮರಾಠ ಧ್ವಜವನ್ನು ಕೈಗಿಟ್ಟು ಘೋಷಣೆ ಕೂಗಿಸುತ್ತಿದ್ದಾರೆ. 'ಮಹಾ' ಪುಂಡರ ಗಲಾಟೆ ಹೆಚ್ಚಾದ ಹಿನ್ನೆಲೆ ಮುಂಜಾಗೃತ ಕ್ರಮವಾಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮವು ವಿಜಯಪುರ ಜಿಲ್ಲೆಯಿಂದ ಮಹಾರಾಷ್ಟ್ರಕ್ಕೆ ಬಸ್ಗಳ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.
ವಿಜಯಪುರದಿಂದ ಮಹಾರಾಷ್ಟ್ರಕ್ಕೆ ನಿತ್ಯ 111 ಸರ್ಕಾರಿ ಬಸ್ಗಳು ತೆರಳುತ್ತಿದ್ದವು. ಈಗ ಎಲ್ಲ ಬಸ್ ಸಂಚಾರ ಬಂದ್ ಮಾಡಲಾಗಿದೆ ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಅಧಿಕಾರಿಗಳು ತಿಳಿಸಿದ್ದಾರೆ.