ವಿಜಯಪುರದ ಮನಗೂಳಿಯಲ್ಲಿ ಸರಣಿ ಭೂಕಂಪನ ಹಿನ್ನಲೆ: ವಿಜ್ಞಾನಿಗಳ ತಂಡ ಭೇಟಿ, ಪರಿಶೀಲನೆ
ವಿಜಯಪುರ: ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳಿನಿಂದ ಪದೇ ಪದೇ ಭೂಕಂಪನದ ಉಂಟಾಗಿತ್ತು. ಇದರೊಟ್ಟಿಗೆ ಭಾರೀ ಶಬ್ದ ಕೂಡ ಕೇಳಿ ಬರುತ್ತಿದ್ದರಿಂದ, ಜನರು ಬೆಚ್ಚಿ ಬಿದ್ದಿದ್ದರು. ಈ ಹಿನ್ನಲೆಯಲ್ಲಿ ವಿಜ್ಞಾನಿಗಳ ತಂಡ ಇಂದು ದೆಹಲಿ, ಬೆಂಗಳೂರು, ಹೈದರಾಬಾದ್ ನಿಂದ ಭೇಟಿ ನೀಡಿ ಪರಿಶೀಲನೆಯಲ್ಲಿ ತೊಡಗಿದೆ.
ಇಂದು ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮನಗೂಳಿಗೆ ಬೆಂಗಳೂರು, ದೆಹಲಿ, ಹೈದರಾಬಾದ್ ನಿಂದ ಆಗಮಿಸಿದಂತ ವಿಜ್ಞಾನಿಗಳ ತಂಡ ಭೇಟಿ ನೀಡಿತು. ಇದೇ ಸಂದರ್ಭದಲ್ಲಿ ಸ್ಥಳೀಯರೊಂದಿಗೆ ಸಭೆ ನಡೆಸಿದಂತ ರಾಜ್ಯ ಪ್ರಕೃತಿ ವಿಕೋಪ ನಿರ್ವಹಣೆ ಕೇಂದ್ರದ ಮುಖ್ಯಸ್ಥರಾದ ಡಾ.ಶ್ರೀನಿವಾಸ ರೆಡ್ಡಿಯವರು, ಭೂಕಂಪನದ ಬಗ್ಗೆ ತಿಳುವಳಿಕೆ ಹಾಗೂ ರಕ್ಷಣೆ, ಧೈರ್ಯವನ್ನು ಹೇಳಿದರು.
ಅಂದಹಾಗೇ ಕಳೆದ ಸೆಪ್ಟೆಂಬರ್ ನಿಂದ ಇಲ್ಲಿಯವರೆಗೆ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಸೇರಿದಂತೆ ಅನೇಕ ಸ್ಥಳಗಳಲ್ಲಿ ಭೂಕಂಪನ ಸಂಭವಿಸಿತ್ತು. ರಿಕ್ಟರ್ ಮಾಪಕದಲ್ಲಿ 2.5ರಷ್ಟು ತೀವ್ರತೆಕೂಡ ದಾಖಲಾಗಿತ್ತು. ಇದರಿಂದ ಜಿಲ್ಲೆಯ ಜನರು ಬೆಚ್ಚಿ ಬಿದ್ದಿದ್ದರು.