ಮುನಿರತ್ನ ವಿರುದ್ಧ ಅಖಾಡಕ್ಕಿಳಿಯುತ್ತಾರಾ 'ಪ್ರೇಮಿಸಂ' ಸ್ಟಾರ್? ಚೇತನ್ ಚಂದ್ರ ನಿರ್ಧಾರದ ಗುಟ್ಟೇನು?

ಮುನಿರತ್ನ ವಿರುದ್ಧ ಅಖಾಡಕ್ಕಿಳಿಯುತ್ತಾರಾ 'ಪ್ರೇಮಿಸಂ' ಸ್ಟಾರ್? ಚೇತನ್ ಚಂದ್ರ ನಿರ್ಧಾರದ ಗುಟ್ಟೇನು?

ಚುನಾವಣೆ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ರಾಜ್ಯದ ರಾಜಕೀಯ ಅಖಾಡದಲ್ಲಿ ಬಿರುಸಿನ ಚಟುವಟಿಗಳು ನಡೆಯುತ್ತಲೇ ಇವೆ. ಪಕ್ಷಬಿಟ್ಟು ಬೇರೆ ಪಕ್ಷಕ್ಕೆ ಹಾರೋದು. ಟಿಕೆಟ್‌ಗಾಗಿ ಲಾಬಿ, ಎದುರಾಳಿಗಳನ್ನು ಹೆಣೆಯಲು ರಣತಂತ್ರಗಳನ್ನು ರೂಪಿಸುವಲ್ಲಿ ರಾಜಕೀಯ ಮುಖಂಡರು ನಿರತರಾಗಿದ್ದಾರೆ.

ಈ ಮಧ್ಯೆ ಚುನಾವಣಾ ಕಣದಲ್ಲಿ ಹೊಸ ಹೊಸ ಹೆಸರುಗಳು ಕೇಳಿ ಬರುತ್ತಿವೆ. ಸದ್ಯ ರಾಜಕೀಯ ಹಾಗೂ ಸಿನಿಮಾ ವಲಯದಲ್ಲಿ ಹೊಸ ಹೆಸರೊಂದು ಓಡಾಡುತ್ತಿದೆ. ಅವರೇ ಚೇತನ್ ಚಂದ್ರ. ಕನ್ನಡ ಚಿತ್ರದಲ್ಲಿ ಸುಮಾರು 15 ವರ್ಷಗಳಿಂದ ನಟಿಸುತ್ತಿರುವ ಹೀರೊ ಈ ಬಾರಿ ಚುನಾವಣೆಗೆ ನಿಲ್ಲುತ್ತಾರೆ ಅನ್ನೋ ಸುದ್ದಿ ಓಡಾಡುತ್ತಿದೆ.

ಸ್ಯಾಂಡಲ್‌ವುಡ್‌ನ ಈ ಸ್ಟಾರ್ ನಟ ಕನ್ನಡ ಚಿತ್ರರಂಗಕ್ಕೆ ಚಿರಪರಿಚಿತ. 'ಪಿಯುಸಿ', 'ಪ್ರೇಮಿಸಂ', 'ರಾಜಧಾನಿ','ಕುಂಬರಾಶಿ', 'ಜಾತ್ರೆ', 'ಹುಚ್ಚುಡುಗ್ರು', 'ಸಂಯುಕ್ತ 2', 'ಪ್ಲಸ್' ಸೇರಿದಂತೆ ಹಲವು ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿದ್ದಾರೆ. ಸದ್ಯ ಅವರ 'ಪ್ರಭುತ್ವ' ಸಿನಿಮಾ ಬಿಡುಗಡೆಗೆ ಸಜ್ಜಾಗಿ ನಿಂತಿದೆ. ಈ ಗ್ಯಾಪ್‌ನಲ್ಲಿ ರಾಜಕೀಯಕ್ಕೂ ಧುಮುಕುತ್ತಾರೆ ಅನ್ನೋ ಸುದ್ದಿ ಓಡಾಡುತ್ತಿದೆ.

ಹಾಲಿ ಶಾಸಕ ಮುನಿರತ್ನ ವಿರುದ್ಧ ಚೇತನ್ ಚಂದ್ರ ಸ್ಪರ್ಧೆ?

ಕನ್ನಡ ಚಿತ್ರರಂಗದಲ್ಲಿ ಇಂತಹದ್ದೊಂದು ಸುದ್ದಿ ಓಡಾಡುತ್ತಿದೆ. ನಟ ಚೇತನ್ ಚಂದ್ರ ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆ. ಈ ಬಾರಿ ಎಲೆಕ್ಷನ್‌ನಲ್ಲೇ ಸ್ಪರ್ಧೆ ಮಾಡಲಿದ್ದು, ಬೆಂಗಳೂರಿನ ರಾಜರಾಜೇಶ್ವರಿ ನಗರದಿಂದ ಕಣಕ್ಕಿಳಿಯಲಿದ್ದಾರೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ.

ಸದ್ಯ ರಾಜರಾಜೇಶ್ವರಿ ವಿಧಾನ ಸಭಾ ಕ್ಷೇತ್ರದ ಹಾಲಿ ಶಾಸಕ ಮುನಿರತ್ನ. ಇವರ ವಿರುದ್ಧವೇ ನಟ ಚೇತನ್ ಚಂದ್ರ ಕಣ್ಣಕ್ಕಿಳಿಯಲು ನಿರ್ಧರಿಸಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ. ಆದರೆ, ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುತ್ತಿದ್ದಾರಾ? ಇಲ್ಲಾ ಯಾವುದಾದರೂ ಪಕ್ಷದಿಂದ ಚುನಾವಣೆ ಧುಮುಕುತ್ತಾರಾ? ಅನ್ನೋದು ಇನ್ನಷ್ಟ ಸ್ಪಷ್ಟ ಆಗಬೇಕಿದೆ. ಚುನಾವಣೆ ಸ್ಪರ್ಧೆ ಮಾಡುವ ಬಗ್ಗೆ ಫಿಲ್ಮಿಬೀಟ್ ಚೇತನ್ ಚಂದ್ರ ಸಂಪರ್ಕ ಮಾಡಿತ್ತು. ಈ ಬಗ್ಗೆ ಚೇತನ್ ಹೀಗೆ ಪ್ರತಿಕ್ರಿಯೆ ನೀಡಿದ್ದಾರೆ