ಹಾಸನದಲ್ಲಿ ಜೆಡಿಎಸ್ ಟಿಕೆಟ್ ಫೈಟ್ : `ಕರ್ನಾಟಕದ ಅಮ್ಮ ಭವಾನಿ ರೇವಣ್ಣ' ಪೋಸ್ಟರ್ ವೈರಲ್

ಹಾಸನದಲ್ಲಿ ಜೆಡಿಎಸ್ ಟಿಕೆಟ್ ಫೈಟ್ : `ಕರ್ನಾಟಕದ ಅಮ್ಮ ಭವಾನಿ ರೇವಣ್ಣ' ಪೋಸ್ಟರ್ ವೈರಲ್

ಹಾಸನ : ಹಾಸನ ವಿಧಾಸಭಾ ಕ್ಷೇತ್ರದ ಟಿಕೆಟ್​​​​ಗಾಗಿ ಜೆಡಿಎಸ್​ನಲ್ಲಿ ಕಲಹ ಪ್ರಾರಂಭವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಜೆಡಿಎಸ್ ಕಾರ್ಯಕರ್ತರು ಭವಾನಿ ರೇವಣ್ಣ ಪರ ಅಭಿಯಾನ ಶುರುಮಾಡಿದ್ದಾರೆ.

ಹಾಸನ ವಿಧಾನಸಭೆ ಕ್ಷೇತ್ರಕ್ಕೆ ಭವಾನಿ ರೇವಣ್ಣಗೆ ಜೆಡಿಎಸ್ ಟಿಕೆಟ್ ನೀಡಬೇಕೆಂದು ಜೆಡಿಎಸ್ ಕಾರ್ಯಕರ್ತರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುತ್ತಿದ್ದಾರೆ.

ಹಾಸನದ ಮುಂದಿನ ಎಂಎಲ್​ಎ, ಕರ್ನಾಟಕ ರಾಜ್ಯದ ಮಹಿಳಾ ಶಕ್ತಿಗೆ ಮತ್ತೊಂದು ಭರವಸೆ ಅಮ್ಮ ಎಂದು ಭವಾನಿ ರೇವಣ್ಣ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಪ್ರಾರಂಭಿಸಿದ್ದಾರೆ.

ಎಂದು ಭವಾನಿ ರೇವಣ್ಣ ಅಭಿಮಾನಿಗಳು ಹಾಸನದಲ್ಲಿ ಭವಾನಿ ರೇವಣ್ಣ ಪರ ಟ್ರೆಂಡ್​ ಸೆಟ್​​ ಮಾಡುತ್ತಿದ್ದು ಪೋಸ್ಟರ್​ ಸಾಕಷ್ಟು ವೈರಲ್​ ಆಗುತ್ತಿದೆ.