ಅಪ್ಪು ಭಾವಚಿತ್ರ ಹೊತ್ತು ಅಗ್ನಿ ಪ್ರವೇಶ ಮಾಡಿದ ಅಭಿಮಾನಿ
ಕೋಲ್ಹಾರ : ವಿಜಯಪುರ ಜಿಲ್ಲೆ ಕೊಲ್ಹಾರ ಪಟ್ಟಣದ ವೀರಭದ್ರೇಶ್ವರ ಜಾತ್ರೋತ್ಸವ ನಿಮಿತ್ತ ಶನಿವಾರ ಜರುಗಿದ ಅಗ್ನಿ ಪ್ರವೇಶ ಕಾರ್ಯಕ್ರಮದಲ್ಲಿ ಪವರ್ ಸ್ಟಾರ್ ದಿವಂಗತ ಡಾ.ಪುನಿತ್ ರಾಜಕುಮಾರ್ ಅಭಿಮಾನಿ ಹರೀಶ್ ಬಸಪ್ಪ ಕೊಠಾರಿ ಅಪ್ಪು ಭಾವಚಿತ್ರವನ್ನು ತೆಲೆ ಮೇಲೆ ಹೊತ್ತು ಅಗ್ನಿ ಪ್ರವೇಶಿಸಿದ್ದಾರೆ.
ಹರೀಶ್ ಅವರ ಅಕ್ಕ ಸಾವಿತ್ರಿ ಕೊಠಾರಿ ಕೂಡಾ ಅಪ್ಪು ಅವರ ದೊಡ್ಡ ಅಭಿಮಾನಿಯಾಗಿದ್ದು, ತಮ್ಮ ಹರೀಶ ಜಾತ್ರೆಯಲ್ಲಿ ಅಗ್ನಿ ಹಾಯುವ ವಿಷಯ ತಿಳಿದಾಗ ಅಪ್ಪು ಅವರ ಭಾವಚಿತ್ರ ಹಿಡಿದು ಅಗ್ನಿ ಪ್ರವೇಶ ಮಾಡಬೇಕೆಂದು ಪಟ್ಟು ಹಿಡಿದು ತಮ್ಮನ ಮುಂದೆ ತನ್ನ ಆಸೆ ವ್ಯಕ್ತಪಡಿಸಿದ್ದಾರೆ.
ಹರೀಶ್ ಕಾತುರದಿಂದ ಬೆಳಿಗ್ಗೆಯೇ ಫೋಟೋ ಅಂಗಡಿ ತೆಗೆಸಿ ಪುನೀತ್ ರಾಜಕುಮಾರ್ ಅವರ ಫೊಟೋ ಮಾಡಿಸಿಕೊಂಡು ಜಾತ್ರೆಯಲ್ಲಿ ಅಪ್ಪು ಭಾವಚಿತ್ರವನ್ನ ತಲೆ ಮೇಲೆ ಹೊತ್ತುಕೊಂಡು ಅಗ್ನಿ ಪ್ರವೇಶ ಮಾಡಿ ತನ್ನ ಅಕ್ಕನ ಆಸೆ ಈಡೇರಿಸಿದ್ದಾರೆ.
ಅಕ್ಕ ತಮ್ಮನ ಅಕ್ಕರೆಯ ಅಪ್ಪು ಅಭಿಮಾನಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದು,ಸಧ್ಯ ಈ ಸುದ್ದಿ ವೈರಲ್ ಆಗ್ತಾಯಿರೋದು ಅಭಿಮಾನಿಗಳಲ್ಲಿ ಆನಂದವನ್ನುಂಟು ಮಾಡಿದೆ.
ನೈನ್ ಲೈವ್ ನ್ಯೂಸ್ ಕೋಲ್ಹಾರ