ಟವಲ್ ನೀಡಲು ತಡ ಮಾಡಿದ ಪತ್ನಿಯನ್ನು ಕೊಂದ ಪತಿ..!
ಬಾಲಾಘಾಟ್, ನ.7- ಸ್ನಾನ ಮುಗಿದ ಬಳಿಕ ಮೈ ಒರೆಸಿಕೊಳ್ಳಲು ಟವಲ್ ಕೊಡಲು ವಿಳಂಬ ಮಾಡಿದ ಪತ್ನಿಯನ್ನು ಭೀಕರವಾಗಿ ಹತ್ಯೆ ಮಾಡಿದ ಘಟನೆ ಮಧ್ಯ ಪ್ರದೇಶದ ಕಿರಣಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಅರಣ್ಯ ಇಲಾಖೆಯಲ್ಲಿ ದಿನಗೂಲಿ ನೌಕರರಾಗಿರುವ ಬಾಲಾಘಾಟ್ ಜಿಲ್ಲೆಯ ಹಿರಾಪುರ ಗ್ರಾಮದ ರಾಜಕುಮಾರ್ ಬಹೆ (50) ತಮ್ಮ ಪತ್ನಿ ಪುಷ್ಪಾ ಬಾಯಿ (45) ಅವರನ್ನು ಹತ್ಯೆ ಮಾಡಿದ ಆರೋಪಕ್ಕಾಗಿ ಬಂಧನಕ್ಕೆ ಒಳಗಾಗಿದ್ದಾರೆ.
ಶನಿವಾರ ಸಂಜೆ ಸ್ನಾನ ಮುಗಿದ ಬಳಿಕ ಟವಲ್ ನೀಡುವಂತೆ ರಾಜ್‍ಕುಮಾರ್ ಕೇಳಿದ್ದಾರೆ. ನಾನು ಪಾತ್ರೆ ತೊಳೆಯುತ್ತಿದ್ದೇನೆ. ಸ್ವಲ್ಪ ಹೊತ್ತು ಕಾಯಿರಿ ಎಂದು ಪತ್ನಿ ಹೇಳಿದ್ದಾರೆ. ಇದರಿಂದ ಸಿಟ್ಟಿಗೆದ್ದ ರಾಜ್ ಕುಮಾರ್ ಸಲಿಕೆಯಿಂದ ಪತ್ನಿಯ ತಲೆಗೆ ಪದೇ ಪದೇ ಜಜ್ಜಿದ್ದಾರೆ. ಗಂಭೀರವಾಗಿ ಗಾಯಗೊಂಡ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಲ್ಲೆ ನಡೆಯುವಾಗ ತಡೆಯಲು ತಡೆಯಲು ಯತ್ನಿಸಿದ 23 ವರ್ಷದ ಪುತ್ರಿಗೂ ಬೆದರಿಕೆ ಹಾಕಿರುವುದಾಗಿ ಹೇಳಲಾಗಿದೆ.
ಕುಟುಂಬದ ಸದಸ್ಯರು ನೀಡಿದ ದೂರು ಆಧರಿಸಿ ಆರೋಪಿಯನ್ನು ಬಂಧಿಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ಬಳಿಕ ಶವವನ್ನು ಕುಟುಂಬದ ಸದಸ್ಯರಿಗೆ ಹಸ್ತಾಂತರಿಸಲಾ