ಎಚ್ಚರ..ಎಚ್ಚರ ! 'ಗೊರಕೆ' ತಡೆ ಯಂತ್ರ ಹೆಸರಲ್ಲಿ ಜನರಿಗೆ 'ಟೋಪಿ' : ಬೆಂಗಳೂರಿನಲ್ಲಿ ನಾಲ್ವರು ಖದೀಮರ ಸೆರೆ

ಎಚ್ಚರ..ಎಚ್ಚರ ! 'ಗೊರಕೆ' ತಡೆ ಯಂತ್ರ ಹೆಸರಲ್ಲಿ ಜನರಿಗೆ 'ಟೋಪಿ' : ಬೆಂಗಳೂರಿನಲ್ಲಿ ನಾಲ್ವರು ಖದೀಮರ ಸೆರೆ

ಬೆಂಗಳೂರು : ಗೊರಕೆ ನಿಲ್ಲಿಸುವ ಟೋಪಿಗಳನ್ನು ಮಾರಾಟ ಮಾಡಿದರೆ ಹೆಚ್ಚು ಕಮಿಷನ್ ನೀಡುವುದಾಗಿ ಹೇಳಿಜನರಿಗೆ ಟೋಪಿ ಹಾಕಿ ಯಾಮಾರಿಸುತ್ತಿದ್ದ ಗ್ಯಾಂಗ್ ಒಂದು ಅಂದರ್ ಆಗಿದೆ. ಚೈನ್ ಲಿಂಕ್ ಕಂಪನಿಯೊಂದರ ಮುಖ್ಯಸ್ಥ ಸೇರಿದಂತೆ ನಾಲ್ವರನ್ನು ಹೈಗೌಂಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಮಹಾರಾಷ್ಟ್ರದ ಮುಂಬೈ ನಗರದ ಸುನೀಲ್ ಜೋಶಿ, ಬೆಂಗಳೂರಿನ ಶೇಖ್ ಸಾದಿಕ್ ಆಲಿ, ಎನ್.ಯೋಗೇಶ್ ಹಾಗೂ ಪ್ರಮೋದ್ ಗೋಪಿನಾಥ್ ಎಂದು ಗುರುತಿಸಲಾಗಿದೆ.

ಇತ್ತೀಚೆಗೆ ಖದೀಮರು ತನ್ನ ಏಜೆಂಟ್ಗಳ ಸಭೆ ಕರೆದು ಸಾರ್ವಜನಿಕರಿಂದ ಮಾಗ್ನೆಟಿಕ್ ಅಂಶವಿರುವ ಮ್ಯಾಜಿಕ್ ಟೋಪಿ ಎಂದು. ಸುಳ್ಳು ಪ್ರಚಾರ ನಡೆಸಿ ಕಿಟ್ಗಳನ್ನು ಚೈನ್ ಲಿಂಕ್ ಹೆಸರಿನ ಕಂಪನಿ ಮಾರಾಟ ಮಾಡುತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದ್ದು, ಕೂಡಲೇ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದೆ.ತಲೆಗೆ ಮ್ಯಾಗ್ನೆಟಿಕ್ ಅಂಶವಿರುವ ಟೋಪಿ ಹಾಕಿಕೊಂಡರೆ ನಿದ್ರೆ ಮಾಡುವಾಗ ಗೊರಕೆ ಬರುವುದಿಲ್ಲ. ಸುಖವಾಗಿ ನಿದ್ರೆ ಮಾಡಬಹುದು ಎಂದು ಪ್ರಚಾರ ನಡೆಸಿ 25 ಸಾವಿರಕ್ಕೆ ಮಾರಾಟ ಮಾಡಲಾಗಿದೆ ಎನ್ನಲಾಗಿದೆ.

ಇತ್ತೀಚೆಗೆ ಮಿಲ್ಲರ್ ರಸ್ತೆಯ ಅಂಬೇಡ್ಕರ್ ಭವನದಲ್ಲಿ ಸುಮಾರು ಒಂದು ಸಾವಿರ ಜನರನ್ನು ಸೇರಿಸಿ ಪಿರಾಮಿಡ್ ಚೈನ್ ಲಿಂಕ್ ವ್ಯವಸ್ಥೆಯಲ್ಲಿ ಠೇವಣಿ ಸಂಗ್ರಹಕ್ಕೆ ಬಯೋಟೋರಿಯಂ ಕಂಪನಿ ಮುಂದಾಗಿತ್ತು. ಈ ಕಂಪನಿಗೆ ಹೆಚ್ಚಿನ ಜನರನ್ನು ಸೇರಿಸುತ್ತ ಹೋದರೆ ಅಧಿಕ ಲಾಭ ಬರುತ್ತದೆ ಎಂದು ಆಮಿಷವೊಡ್ಡಿದರು. ಗೊರಕೆ ಟೋಪಿ ಎಂದು ಹೇಳಿ ನಂಬಿಸಿ ಮಾರಾಟ ಮಾಡಿದ್ದ ಟೋಪಿಯ ಬೆಲೆ ಕೇವಲ 300 ರಿಂದ 400 ರುಪಾಯಿ ಇರಬಹುದು. ಅದ ರಲ್ಲಿ ಯಾವುದೇ ಮ್ಯಾಗ್ನೆಟಿಕ್ ಅಂಶ ಇರಲಿಲ್ಲ, ಇದನ್ನು 25 ಸಾವಿರಕ್ಕೆ ಮಾರಾಟಕ್ಕೆ ಯತ್ನಿಸಿದ್ದರು .ಸದ್ಯ ಕಂಪನಿ ಮುಖ್ಯಸ್ಥ ಸುನೀಲ್ ಜೋಶಿ ಬ್ಯಾಂಕ್ ಖಾತೆ ಖಾತೆಯಲ್ಲಿದ್ದ 38 ಲಕ್ಷ ರೂ ಹಣ ಸೀಜ್ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.