ಕೋಲಾರದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆ : ಸಚಿವ ಮುನಿರತ್ನ

ಕೋಲಾರದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆ : ಸಚಿವ ಮುನಿರತ್ನ

ಕೋಲಾರ : ಈ ಬಾರಿ ಕೋಲಾರದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡಲಾಗುತ್ತದೆ ಎಂದು ಸಚಿವ ಮುನಿರತ್ನ ಭರವಸೆ ನೀಡಿದರು.

ನಗರದ ಸರ್ ಎಂ.ವಿ ಕ್ರೀಡಾಂಗಣದಲ್ಲಿ 74ನೇ ಗಣ ರಾಜ್ಯೋತ್ಸವ ಧ್ವಜಾ ರೋಹಣ ಮಾಡಿ ನಂತರ ಮಾತನಾಡಿದರು.

ಈ ಬಾರಿಯ ಬಜೆಟ್ನಲ್ಲಿ ಮಾವು ಸಂಸ್ಕರಣಾ ಘಟಕ ಸ್ಥಾಪನೆ ಹಾಗೂ ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡಲಾಗುವುದು ಎಂದರು.

ಈ ಬಾರಿ ಕೋಲಾರದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡಲಾಗುತ್ತದೆ. ಜಿಲ್ಲೆಯ ಅಭಿವೃದ್ದಿಗೆ ನಮ್ಮ ಸರ್ಕಾರ ಬದ್ದವಾಗಿದೆ. ಒಂದು ದೇಶ ಅಭಿವೃದ್ಧಿ ಪಥದಲ್ಲಿ ಸಾಗಬೇಕಾದರೆ ಅದರ ಸರ್ವತೋಮುಖ ಅಭಿವೃದ್ಧಿ ಅತ್ಯಗತ್ಯ., ಸಾಮಾಜಿಕ ಕಳಕಳಿ, ಸಮೃದ್ಧ ಸಂಪನ್ಮೂಲದ ಜೊತೆಜೊತೆಗೆ ಆರೋಗ್ಯಕರ ಸಮಾಜವೂ ಅತಿ ಮುಖ್ಯ. ಗಡಿ ಕಾಯುವ ಯೋಧರ ತ್ಯಾಗ ಬಲಿದಾನಗಳನ್ನು ನಾವು ಗೌರವಿಸಬೇಕು. ನಮ್ಮ ಯೋಧರ ಧೈರ್ಯ ಮತ್ತು ಅನ್ನದಾತರ ಸಂಯಮ ನಮಗೆ ಆದರ್ಶಗಳಾಗಬೇಕು ಎಂದು ಹೇಳಿದರು.