ಸಾವಿನ ಮನೆಯಾದ ಸರ್ಕಾರಿ ಆಸ್ಪತ್ರೆಗಳು ತಾಲ್ಲೂಕು ಕಿಸಾನ್ ಅಧ್ಯಕ್ಷ ಗಂಭೀರ ಆರೋಪ
ಸಾವಿನ ಮನೆಯಾದ ಸರ್ಕಾರಿ ಆಸ್ಪತ್ರೆಗಳು ತಾಲ್ಲೂಕು ಕಿಸಾನ್ ಅಧ್ಯಕ್ಷ ಗಂಭೀರ ಆರೋಪ ಚಿಕ್ಕಮಗಳೂರು : ಜಿಲ್ಲೆಯ ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸೆ ದೊರಕದೆ ಅಲ್ಲಿ ಹೋಗುವ ಬಹುತೇಕ ಕೊರೋನಾ ಸೋಂಕಿತರು ಸಾವನ್ನು ಅಪ್ಪುತ್ತಿದಾರೆ ಎಂದು ಕೊಪ್ಪ ತಾಲ್ಲೂಕು ಕಿಸಾನ್ ಅಧ್ಯಕ್ಷ ಅಶೋಕ್ ದೂರಿದರು . ಸರ್ಕಾರ , ಜನಪ್ರತಿನಿಧಿಗಳು, ಜಿಲ್ಲಾಡಳಿತ ಇದರ ಬಗ್ಗೆ ಗಮನ ಹರಿಸುತ್ತಿಲ್ಲ, ಇನ್ನೆಷ್ಟು ಸಾವು ನೋವು ನೋಡಬೇಕು ಎಂದು ಪ್ರಶ್ನಿಸಿದ್ದಾರೆ. ಈ ಬೆಳವಣಿಗೆಯಿಂದ ಚಿಕ್ಕಮಗಳೂರು ಜಿಲ್ಲೆಯ ಜನತೆ ಭಯಭೀತರಾಗಿದ್ದು ಇದಕ್ಕೆಲ್ಲ ಕೊನೆ ಯಾವಾಗ ? ಎಂದು ಕಳವಳ ಹೊರಹಾಕಿ ಈ ಅವ್ಯವಸ್ಥೆಯಿಂದ ಕೊಪ್ಪ ತಾಲ್ಲೂಕಿನಲ್ಲಿ ಇತ್ತೀಚೆಗೆ ಮೃತಪಟ್ಟ ಕೆಲವರ ಹೆಸರನ್ನು ಸಹ ಉಲ್ಲೇಖಿಸಿ ಹೇಳಿದರು. ಸಾವಿನ ಅಂಕಿ ಅಂಶಗಳಲ್ಲಿ ವ್ಯತ್ಯಾಸ ಕಾಣುತ್ತಿದೆ ಎಂದು ಶಂಕಿಸಿದ ಅವರು ಜನರ ಪ್ರಾಣದೊಂದಿಗೆ ಚೆಲ್ಲಾಟವಾಡದೆ , ಜೀವ ಉಳಿಸುವ ನಿಟ್ಟಿನಲ್ಲಿ ಹೆಚ್ಚಿನ ಶ್ರಮವಹಿಸಬೇಕು, ಅದಕ್ಕೆ ಬೇಕಾದ ಸೌಕರ್ಯಗಳನ್ನು ಜಿಲ್ಲಾಡಳಿತ ಕಲ್ಪಿಸಬೇಕು ಎಂದು ಒತ್ತಾಯಿಸಿದರು .