ಚುನಾವಣೆಗಾಗಿ ಎರಡು ತಿಂಗಳಲ್ಲಿ ಸುಮಾರು 7 ಸಾವಿರ ರೌಡಿಗಳಿಗೆ ಮುಕ್ತಿ!

ಬೆಂಗಳೂರು : ರಾಜ್ಯದಲ್ಲಿ ಚುನಾವಣೆ ಹತ್ತಿರ ಬರುತ್ತಿದೆ. ಸದ್ಯ ಕೆಲ ರೌಡಿಶೀಟರ್ ಗಳು ಫುಲ್ ಆಕ್ಟಿವ್ ಆಗಿದ್ದಾರೆ. ಯಾವುದಾದರೂ ಪಕ್ಷದಿಂದ ಬಿ ಫಾರಂ ಪಡೆದು ಚುನಾವಣೆಯಲ್ಲಿ ಒಂದು ಕೈ ನೋಡೋಣ ಎಂದು ತೊಡೆತಟ್ಟಿದ್ದಾರೆ. ಕೆಲ ರೌಡಿ ಶೀಟರ್ಸ್ ಗಳು ಎಲೆಕ್ಷನ್ ಮೇಲೆ ಕಣ್ಣಿಟ್ಟು ತಮ್ಮ ತಮ್ಮ ಕ್ಷೇತ್ರಗಳಲ್ಲಿ ವರ್ಕೌಟ್ ಶುರು ಮಾಡಿದ್ದಾರೆ.
ಹಾಗಾದ್ರೆ ಯಾವ ವರ್ಷ ಎಷ್ಟು ಮಂದಿಯನ್ನು ರೌಡಿಪಟ್ಟಿಯಿಂದ ಕೈಬಿಡಲಾಗಿದೆ ಎಂಬದನ್ನು ನೋಡುವುದಾದರೆ
2018 - 3489
2019 - 2195
2020 - 1718
2021 - 8062
2022 - 3314
2023 - 7361
ಹೀಗೆ ಪ್ರತಿ ವರ್ಷ ಎರಡು ಮೂರು ಸಾವಿರದಷ್ಟು ರೌಡಿಗಳನ್ನ ಪಟ್ಟಿಯಿಂದ ಕೈ ಬಿಡಲಾಗಿದೆ. ಆದರೆ ಈ ವರ್ಷದ ಆರಂಭದಲ್ಲೇ ಅಂದರೆ ಒಂದೂವರೆ ತಿಂಗಳಲ್ಲಿ 7361 ರೌಡಿಗಳನ್ನ ಪಟ್ಟಿಯಿಂದ ಕೈ ಬಿಡಲಾಗಿದೆ. ಇದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಇನ್ನೂ 2023 ರಲ್ಲಿ ಬೆಂಗಳೂರು ನಗರದಲ್ಲಿ 17 ರೌಡಿಗಳನ್ನ ಪಟ್ಟಿಯಿಂದ ಕೈ ಬಿಡಲಾಗಿದೆ. ರೌಡಿ ಪಟ್ಟಿಯಿಂದ ಹೆಸರು ತೆಗೆದವರಲ್ಲಿ ಯಾರು ಚುನಾವಣೆಗೆ ನಿಲ್ಲುತ್ತಾರೆ ಎಂದು ಗೊತ್ತಿಲ್ಲ. ಯಾವುದೇ ಕ್ರಿಮಿನಲ್ ಆಕ್ಟಿವಿಟಿಯಲ್ಲಿ ಭಾಗಿಯಾಗದೆ ಸಮಾಜ ಮುಖಿ ಕೆಲಸಗಳಲ್ಲಿ ತೊಡಗಿದರೆ ಯಾರೂ ಬೇಡ ಎನ್ನುವುದಿಲ್ಲ. ಆದರೆ ಕಾನೂನು ದುರುಪಯೋಗಪಡಿಸಿಕೊಂಡು ಸಮಾಜ ಕಂಟಕರಾದರೆ ಕಷ್ಟವಾಗುತ್ತದೆ.