ನನ್ನನ್ನು ಸೋಲಿಸಲು ವರುಣಾದಲ್ಲಿ 'ಮ್ಯಾಚ್ ಫಿಕ್ಸಿಂಗ್' ಆಗಿದೆ : ಸಿದ್ದರಾಮಯ್ಯ ಹೊಸ ಬಾಂಬ್

ನನ್ನನ್ನು ಸೋಲಿಸಲು ವರುಣಾದಲ್ಲಿ 'ಮ್ಯಾಚ್ ಫಿಕ್ಸಿಂಗ್' ಆಗಿದೆ : ಸಿದ್ದರಾಮಯ್ಯ ಹೊಸ ಬಾಂಬ್

ಮೈಸೂರು : ನನ್ನನ್ನು ಸೋಲಿಸಲು ವರುಣಾದಲ್ಲಿ ಮ್ಯಾಚ್ ಫಿಕ್ಸಿಂಗ್ ಆಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೊಸ ಬಾಂಬ್ ಸಿಡಿಸಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಿದ್ದರಾಮಯ್ಯ ನನ್ನನ್ನು ಸೋಲಿಸಲು ವರುಣಾದಲ್ಲಿ ಚುನಾವಣೆಗೂ ಮುನ್ನವೇ ಬಿಜೆಪಿ ಹಾಗೂ ಜೆಡಿಎಸ್ ನಡುವೆ ಮ್ಯಾಚ್ ಫಿಕ್ಸಿಂಗ್ ಆಗಿದೆ .

ಇದು ನೂರ‍ಕ್ಕೆ ನೂರರಷ್ಟು ಸತ್ಯ ಎಂದಿದ್ದಾರೆ.

'ಸಿದ್ದರಾಮಯ್ಯ ಯಾವುದೇ ಕ್ಷೇತ್ರದಲ್ಲಿ ನಿಂತರೂ ಸೋಲುತ್ತಾರೆ' : ಸಚಿವ ಗೋವಿಂದ ಕಾರಜೋಳ

ಬಾಗಲಕೋಟೆ : ಮಾಜಿ ಸಿಎಂ ಸಿದ್ದರಾಮಯ್ಯ ಈ ಬಾರಿ ಯಾವುದೇ ಕ್ಷೇತ್ರದಲ್ಲಿ ನಿಂತರೂ ಸೋಲುತ್ತಾರೆ ಎಂದು ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.ಸುದ್ದಿಗಾರರ ಜೊತೆ ಮಾತನಾಡಿದ ಗೋವಿಂದ ಕಾರಜೋಳ 'ವಿಜಯೇಂದ್ರ ಎಲ್ಲಿ ನಿಲ್ಲಬೇಕು ಎಂದು ಹೈಕಮಾಂಡ್ ನಿರ್ಧರಿಸುತ್ತಾರೆ. ಆದರೆ ಸಿದ್ದರಾಮಯ್ಯ ಈ ಬಾರಿ ಎಲ್ಲಿ ನಿಂತರೂ ಸೋಲುತ್ತಾರೆ ಎಂದು ವ್ಯಂಗ್ಯವಾಡಿದರು

ಕಾಂಗ್ರೆಸ್ ನವರಿಗೆ ಜನರ ಅಭಿವೃದ್ಧಿ ಚಿಂತೆ ಇಲ್ಲ. ಸಿಎಂ ಹುದ್ದೆಗಾಗಿ ಎಲ್ಲರೂ ರೇಸ್ ನಲ್ಲಿದ್ದಾರೆ. ಕಾಂಗ್ರೆಸ್ನ ಮೂರು ಮಂದಿ ಸಿಎಂ ಆದ ಮೇಲೆ ಧರಿಸಲು ಅಂಗಿ-ಚಡ್ಡಿ ಹೊಲಿಸಿಕೊಂಡು ಕುಳಿತ್ತಿದ್ದಾರೆ. ಮೀಸಲಾತಿಗಾಗಿ ಹೋರಾಟ ಮಾಡಿದ ಸಮುದಾಯದವರಿಗೆ ಮೀಸಲಾತಿ ಕೊಡುವ ಕೆಲಸವನ್ನು ಸಿಎಂ ಬಸವರಾಜ ಮಾಡಿದ್ದಾರೆ. . ಮೀಸಲಾತಿ ಇರುವುದು ಶೋಷಣೆಗೆ ಒಳಗಾದವರಿಗೆ. ಹೀಗಾಗಿ ಸರ್ಕಾರ ಮೀಸಲಾತಿ ನೀಡಿದೆ ಎಂದು ತಿಳಿಸಿದರು.

ನಮಗೆ ಹೊಂದಾಣಿಕೆ ಅಗತ್ಯವಿಲ್ಲ; ಬಿಜೆಪಿ ಸ್ವತಂತ್ರವಾಗಿಯೇ ಸ್ಪರ್ಧೆ ಮಾಡುತ್ತದೆ: ಸಿ.ಟಿ ರವಿ

ಚಿಕ್ಕಬಳ್ಳಾಪುರ: ಕಳೆದ ಬಾರಿ ಕೂಡ ನಾವು ಹೊಂದಾಣಿಕೆ ಮಾಡಿಕೊಂಡಿರಲಿಲ್ಲ. ಒಂದು ವೇಳೆ ಆ ಹಾಗೆ ಆಗಿದ್ದರೆ, ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ಯೋಗೀಶ್ವರ್ ಸ್ಪರ್ಧೇ ಮಾಡುತ್ತಿರಲಿಲ್ಲ.ನಮ್ಮ ವಿರುದ್ಧ ಜೆಡಿಎಸ್ ಅಭ್ಯರ್ಥಿ 32 ಸಾವಿರ ಮತ ತೆಗೆದುಕೊಂಡರು. ಹೊಂದಾಣಿಕೆ ಮಾಡಿದ್ರೆ ಅಷ್ಟು ಮತಗಳ ತೆಗೆದುಕೊಳ್ತಿದ್ರಾ? ನಮಗೆ ಹೊಂದಾಣಿಕೆ ಅಗತ್ಯವಿಲ್ಲ, ಬಿಜೆಪಿ ಸ್ವತಂತ್ರವಾಗಿಯೇ ಸ್ಪರ್ಧೆ ಮಾಡುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಮೊದಲ ರಾಜಕೀಯ ವಿರೋಧಿ ಜೆಡಿಎಸ್ ಎಂದು ಅಮಿತ್ ಶಾ ಹೇಳಿದ್ದಾರೆ. ಹೀಗಿರುವಾಗ ಹೊಂದಾಣಿಕೆ ಎಲ್ಲಿಂದ? ಹೊಂದಾಣಿಕೆ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ವರುಣಾದಲ್ಲಿ ಬಿಜೆಪಿಯಿಂದ ಯಾರು ಸ್ಪರ್ಧಿ ಎನ್ನುವುದನ್ನು ಪಾರ್ಲಿಮೆಂಟರಿ ಬೋರ್ಡ್ ಸಿದ್ಧ ಮಾಡುತ್ತದೆ.ವರುಣಾದಲ್ಲಿ ಸಿದ್ದು ವಿರುದ್ಧ ಬಿಜೆಪಿಯಿಂದ ಯಾರು ಸ್ಪರ್ಧಿ ಎನ್ನುವುದನ್ನು ಪಾರ್ಲಿಮೆಂಟರಿಬೋರ್ಡ್ ಸಿದ್ಧ ಮಾಡುತ್ತದೆ.ನಾವು ಯಾರ ವಿರುದ್ಧ ಅಂತಿಲ್ಲ, ನಾವು ಬಿಜೆಪಿ ಪರ ಅಷ್ಟೆ. ನಮ್ಮದು ವೈಚಾರಿಕ ರಾಜಕೀಯ ಪಕ್ಷವಾಗಿದ್ದು, ನಮ್ಮ ಪಕ್ಷದ ವಿಚಾರವನ್ನು ಬೆಳೆಸೋದಷ್ಟೆ ನಮ್ಮ ಗುರಿ. ನಮ್ಮದು ನಕಾರಾತ್ಮಕ ರಾಜಕೀಯ ಅಲ್ಲ, ಸಕಾರಾತ್ಮಕ ರಾಜಕೀಯ, ಪಕ್ಷ ಬೆಳೆಸುವುದು ಎಂದರು.