ನನ್ನ ವ್ಯಕ್ತಿತ್ವಕ್ಕೆ ಮಸಿ ಬಳಿಬೇಕೆಂದು ಕೆಲವೊಂದನ್ನು ಕ್ರಿಯೇಟ್ ಮಾಡುತ್ತಿದ್ದಾರೆ: ವೇದಿಕೆಯಲ್ಲೇ ಕಣ್ಣೀರಿಟ್ಟ ಹೆಚ್.‌ ಕೆ ಕುಮಾರಸ್ವಾಮಿ

ನನ್ನ ವ್ಯಕ್ತಿತ್ವಕ್ಕೆ ಮಸಿ ಬಳಿಬೇಕೆಂದು ಕೆಲವೊಂದನ್ನು ಕ್ರಿಯೇಟ್ ಮಾಡುತ್ತಿದ್ದಾರೆ: ವೇದಿಕೆಯಲ್ಲೇ ಕಣ್ಣೀರಿಟ್ಟ ಹೆಚ್.‌ ಕೆ ಕುಮಾರಸ್ವಾಮಿ

ಹಾಸನ: ನನ್ನ ವ್ಯಕ್ತಿತ್ವವನ್ನು ಹಾಳು ಮಾಡಬೇಕೆಂದು ಕೆಲವೊಂದನ್ನು ಕ್ರಿಯೇಟ್ ಮಾಡುತ್ತಿದ್ದಾರೆ. ನಾವೆಲ್ಲಾ ಸೇರಿ ಜನ ಸಂಘಟನೆ ಮಾಡಿ ಜನರಿಗೆ ಪಕ್ಷದ ಕಾರ್ಯಕ್ರಮಗಳನ್ನು ಹೇಳಿ ಗೆಲುವು ಸಾಧಿಸೋಣ ಎಂದು ವೇದಿಕೆಯಲ್ಲೇ ಹೆಚ್.‌ ಕೆ ಕುಮಾರಸ್ವಾಮಿ ಕಣ್ಣೀರು ಇಟ್ಟಿದ್ದಾರೆ.

ನಿನ್ನೆ ಸಕಲೇಶಪುರದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಮುಂದಿನ ಚುನಾವಣೆಯಲ್ಲಿ ಜೆಡಿಎಸ್‌ ಅಧಿಕಾರಕ್ಕೆ ಬರಲಿದೆ. ನಮ್ಮ ಅಭಿವೃದ್ಧಿಯನ್ನು ಯಾರು ಕೂಡಾ ನಿಲ್ಲಿಸಲು ಸಾಧ್ಯವಿಲ್ಲ. ನಾವು ಗೆದ್ದೇ ಗೆಲ್ಲುತ್ತೇವೆ ಎನ್ನುವ ಕಾರಣಕ್ಕಾಗಿ ಕೆಲವರು ಅಪ್ರಚಾರ ಮಾಡುವುದಕ್ಕೆ ಶುರು ಮಾಡಿದ್ದಾರೆ. ನಾನು ಇಲ್ಲಿ ಎಲ್ಲವನ್ನೂ ಬಾಯ್ಬಿಟ್ಟು ಹೇಳುವುದಕ್ಕೆ ಆಗುವುದಿಲ್ಲ ಎಂದರು.

14 ವರ್ಷಗಳ ಹಿಂದೆ ಇದ್ದ ನಿಮ್ಮ ಕುಮಾರಸ್ವಾಮಿ ಇರಬಾರದು, ಜನತಾದಳ ಗೆಲ್ಲಬಾರದು ಎಂದು ಆರೋಪಗಳನ್ನು ಈ ವರ್ಷದಲ್ಲಿ ತೆಗೆಯುತ್ತಿದ್ದಾರೆ. ಏನಾದರೂ ಮಾಡಿ ವ್ಯಕ್ತಿತ್ವಕ್ಕೆ ತೊಡಕು ಮಾಡಬೇಕು, ಪಕ್ಷವನ್ನು ಹಾಳು ಮಾಡಬೇಕು ಎಂದು ಎಲ್ಲಾ ಕ್ರಿಯೇಟ್ ಮಾಡ್ತಾ, ಪ್ರಚೋದನೆ ಕೊಡ್ತಾ ಇದ್ದಾರೆ ಎಂದು ಭಾವುಕರಾದರು.