ಅನುಪಮ್ ಅಗರವಾಲ್ ನೂತನ ಡಿಐಜಿ

ಅನುಪಮ್ ಅಗರವಾಲ್ ನೂತನ ಡಿಐಜಿ

ಲಬುರಗಿ: 2008ನೇ ಕರ್ನಾಟಕ ವೃಂದದ ಐಪಿಎಸ್ ಅಧಿಕಾರಿ ಅನುಪಮ್ ಅಗರವಾಲ್ ಅವರನ್ನು ಈಶಾನ್ಯ ವಲಯದ ಡಿಐಜಿಯನ್ನಾಗಿ ವರ್ಗಾವಣೆ ಮಾಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಸೋಮವಾರ ಆದೇಶ ಹೊರಡಿಸಿದೆ.

ಈ ಸ್ಥಾನಕ್ಕೆ ವರ್ಗಾವಣೆಯಾಗಿದ್ದ ಉತ್ತರ ವಲಯದ ಐಜಿಪಿ ಎನ್.

ಸತೀಶ್‌ಕುಮಾರ್ ಅವರನ್ನು ಅದೇ ಹುದ್ದೆಯಲ್ಲಿ ಮುಂದುವರೆಸಲಾಗಿದೆ. ಈಶಾನ್ಯ ವಲಯದ ಐಜಿ ಹುದ್ದೆಯನ್ನು ಡಿಐಜಿ ಹುದ್ದೆ ಮಟ್ಟಕ್ಕೆ ಇಳಿಸಲಾಗಿದೆ.

ಅನುಪಮ್ ಅಗರವಾಲ್ ಅವರು ಬೆಂಗಳೂರು ಹಾಗೂ ಬೆಳಗಾವಿಯಲ್ಲಿ ಡಿಸಿಪಿಯಾಗಿ, ವಿಜಯಪುರ ಎಸ್ಪಿಯಾಗಿ, ಮೈಸೂರಿನ ಪೊಲೀಸ್ ಅಕಾಡೆಮಿ ನಿರ್ದೇಶಕ ಸೇರಿ ಹಲವು ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ.