ರಸ್ತೆಯ ಮಧ್ಯದಲ್ಲೇ ಸಂಪೂರ್ಣ ಬೆತ್ತಲಾದ ಸರ್ಕಾರಿ ನರ್ಸ್ ..! ಮುಂದೆನಾಯ್ತು ಗೊತ್ತಾ
ಜೈಪುರ: ಸಂಪೂರ್ಣ ನಗ್ನವಾಗಿ ರಸ್ತೆ ಮಧ್ಯದಲ್ಲಿ ಗಲಾಟೆ ಮಾಡಿದ ಆರೋಪ ಮೇಲೆ ರಾಜಸ್ಥಾನದ ಜೈಪುರದ ಸರ್ಕಾರಿ ಆಸ್ಪತ್ರೆಯ ನರ್ಸ್ ಒಬ್ಬರನ್ನು ಸೇವೆಯಿಂದ ವಜಾಗೊಳಿಸಲಾಗಿದೆ ಮತ್ತು ಬಂಧಿಸಲಾಗಿದೆ.
ಜೈಪುರದ ಜವಾಹರಲಾಲ್ ನೆಹರು (ಜೆಎಲ್‌ಎನ್) ಮಾರ್ಗದಲ್ಲಿ 36 ವರ್ಷದ ಮಹಿಳೆ ವಿವಸ್ತ್ರವಾಗಿ ಕಾಣಿಸಿಕೊಂಡರು.
ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ಸಹಾಯಕ ನರ್ಸ್ ಮಿಡ್ವೈಫ್ (ಎಎನ್‌ಎಂ) ಆಗಿ ನೇಮಕಗೊಂಡಿದ್ದ ಅವರನ್ನು ಅಜ್ಮೀರ್ ಜಿಲ್ಲೆಯ ಬೇವಾರ್ ಮತ್ತು ಜೈಪುರ ಜಿಲ್ಲೆಯ ದುಡುಗೆ ವರ್ಗಾಯಿಸಲಾಯಿತು. ಇದರ ವಿರುದ್ಧ ಸಾರ್ವಜನಿಕವಾಗಿ ಪ್ರತಿಭಟಿಸಿದ್ದಕ್ಕಾಗಿ ಮಹಿಳೆಯನ್ನು ಅಮಾನತುಗೊಳಿಸಲಾಗಿದೆ.
ಮಹಿಳೆ ತನ್ನ ಸೋದರ ಮಾವನ ವಿರುದ್ಧ ದೂರು ದಾಖಲಿಸಿದ್ದು, ಅವನು ತನ್ನನ್ನು ಪ್ರತಿಭಟನೆ ಮಾಡಿದಕ್ಕಾಗಿ ಅವಮಾನಿಸಿದ್ದಾನೆ ಎಂದು ಆರೋಪಿಸಿದ್ದಳು. ಪೊಲೀಸರ ಪ್ರಕಾರ, ಮಹಿಳೆ ಸಂಪೂರ್ಣವಾಗಿ ನಗ್ನಳಾಗಿ ರಸ್ತೆಯ ಮಧ್ಯದಲ್ಲಿ ಗಲಾಟೆ ಮಾಡಲು ಇದು ಪ್ರಮುಖ ಕಾರಣವಾಗಿದೆ ಎಂದು ತಿಳಿದುಬಂದಿದೆ.
ಮಹಿಳೆ ಬಟ್ಟೆ ಬಿಚ್ಚಿ ರಸ್ತೆಯ ಮಧ್ಯದಲ್ಲಿ ಕೂಗಿದಾಗ, ಸ್ಥಳದಲ್ಲಿದ್ದ ಪೊಲೀಸ್ ತಂಡಕ್ಕೆ ಏನು ಮಾಡಬೇಕೆಂದು ತೋಚಲಿಲ್ಲ. ನಂತರ, ಮಹಿಳಾ ಪೊಲೀಸರನ್ನು ಕರೆತಂದು ಮಹಿಳೆಯನ್ನು ವಶಕ್ಕೆ ತೆಗೆದುಕೊಳ್ಳಲಾಯಿತು. ಸಿಆರ್ಪಿಸಿಯ ಸೆಕ್ಷನ್ 151 ರ ಅಡಿಯಲ್ಲಿ ಶಾಂತಿ ಉಲ್ಲಂಘನೆಗಾಗಿ ಮಹಿಳೆಯನ್ನು ಬಂಧಿಸಿ ಜೈಪುರ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.