ಬಂಟ್ವಾಳ: ರಮಾ ಅಶೋಕ್ ಪೂಜಾರಿ'ಗೆ ಮನೆ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದ ರಾಜೇಶ್ ನಾಯ್ಕ್
ಬಂಟ್ವಾಳ: ಮಾಣಿ ಗ್ರಾಮದ ರಮಾ ಅಶೋಕ್ ಪೂಜಾರಿ ಅವರಿಗೆ ನೂತನವಾಗಿ ಮನೆ ನಿರ್ಮಿಸಿಕೊಡುವುದಾಗಿ ಶಾಸಕ ರಾಜೇಶ್ ನಾಯ್ಕ್ ಭರವಸೆಯನ್ನು ನೀಡಿದ್ದಾರೆ.
ಬಂಟ್ವಾಳ ತಾಲೂಕಿನ ಮಾಣಿ ಗ್ರಾಮದ ರಮಾ ಆಶೋಕ್ ಪೂಜಾರಿ ಅವರ ಮನೆಗೆ ಇತ್ತೀಚಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸಂಪೂರ್ಣ ಬೆಂಕಿಗಾಹುತಿಯಾಗಿತ್ತು.
ಆರ್ಥಿಕ ವಾಗಿ ಬಡವರಾಗಿರುವ ಈ ಕುಟುಂಬಕ್ಕೆ ಶಾಸಕರು ಮನೆ ನಿರ್ಮಾಣ ಮಾಡಿಕೊಡುವ ಭರವಸೆ ನೀಡಿದ್ದಾರೆ, ಸ್ಥಳೀಯ ಬಿಜೆಪಿ ಪ್ರಮುಖ ರು ಮನೆ ನಿರ್ಮಾಣದ ಜವಾಬ್ದಾರಿವಹಿಸಿಕೊಳ್ಳುವಂತೆ ಅವರು ತಿಳಿಸಿದರು. ನಾರಾಯಣ ಶೆಟ್ಟಿ ತೋಟ, ರಾಧಾಕೃಷ್ಣ ಅಡ್ಯಂತಾಯ, ಗಣೇಶ್ ರೈ ಮಾಣಿ, ಹರೀಶ್ ಕುಲಾಲ್ ಮಾಣಿ ಮತ್ತಿತರರು ಈ ವೇಳೆ ಹಾಜರಿದ್ದರು.