ಅತ್ಯಾಚಾರ ಆರೋಪಿ ಅನುಮಾನಾಸ್ಪದ ಸಾವು: ಪಿಎಸ್‌ಐ ಸೇರಿ ಐವರ ಅಮಾನತು
ಅತ್ಯಾಚಾರ ಆರೋಪಿ ಅನುಮಾನಾಸ್ಪದ ಸಾವು: ಪಿಎಸ್‌ಐ ಸೇರಿ ಐವರ ಅಮಾನತು
ಪಿಎಸ್‌ಐ ಹಾಗೂ ಇತರ ನಾಲ್ವರನ್ನು ಅಮಾನತು ಮಾಡಿ ಎಸ್ಪಿ ಆನಂದಕುಮಾರ್ ಆದೇಶ ಹೊರಡಿಸಿದ್ದಾರೆ.
ವಿಜಯಪುರ ಜಿಲ್ಲೆ ಸಿಂದಗಿ ಪಟ್ಟಣದ ಪೊಲೀಸ್ ಠಾಣೆ ವ್ಯಾಪ್ತಿಯ ಡಾಬಾದಲ್ಲಿ ತಂದೆಯೊಂದಿಗೆ ವಾಸವಿದ್ದ 13 ವರ್ಷದ ಬಾಲಕಿ ಮೇಲೆ ಡಾಬಾ ಮಾಲೀಕ ದೇವಿಂದ್ರ ಅತ್ಯಾಚಾರವೆಸಗಿದ್ದಾನೆ ಎಂದು ಸಂತ್ರಸ್ತೆಯ ತಂದೆ ದೂರು ನೀಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ದೇವಿಂದ್ರ ಸಂಗೋಗಿ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ವಿಚಾರಣೆ ವೇಳೆ ಟಾಯ್ಲೆಟ್ಗೆ ಹೋಗುವುದಾಗಿ ಹೇಳಿ ಪೊಲೀಸ್ ಠಾಣೆಯ ಶೌಚಗೃಹಕ್ಕೆ ಹೋದವ ಅಲ್ಲೇ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದ.
ಕರ್ತವ್ಯಲೋಪದ ಆಧಾರದ ಮೇಲೆ ಪಿಎಸ್‌ಐ ಸೇರಿ ಐವರನ್ನು ಅಮಾನತು ಮಾಡಲಾಗಿದೆ. ಈ ಪ್ರಕರಣವನ್ನು ಸಿಐಡಿಗೆ ಹಸ್ತಾಂತರ ಮಾಡಲಾಗಿದೆ.