ಒಂದೇ ವೇದಿಕೆ ಮೇಲೆ ಕಿಚ್ಚ ಸುದೀಪ್-ದರ್ಶನ್ ಸಹೋದರ: ಇಬ್ಬರ ನಡುವಿನ ಸಂಭಾಷಣೆ ಏನು?

ಕರ್ನಾಟಕ ಚಲನಚಿತ್ರ ಕಪ್ ಕಳೆದ ಎರಡು ಸೀಸನ್ ಯಶಸ್ವಿಯಾಗಿ ನಡೆದಿದೆ. ಈಗ ಮೂರನೇ ಸೀನಸ್‌ಗೆ ಮುಂದಾಗಿದೆ. ಈ ಬಾರಿ ಕಳೆದ ಎರಡು ಸೀಸನ್‌ಗಿಂತ ಅದ್ದೂರಿಯಾಗಿ ನಡೆಯುತ್ತೆ ಅನ್ನೋ ಸುಳಿವು ನೋಡಿದ್ದಾರೆ.
ಅದಕ್ಕಾಗಿಯೇ ಕೆಸಿಸಿ ಕಮಿಟಿ ಪ್ರೆಸ್‌ಮೀಟ್ ಕರೆದಿತ್ತು.
ಕಳೆದ ಸೀಸನ್‌ನಲ್ಲಿ ದಿನಕರ್ ತೂಗುದೀಪ ಗೈರಾಗಿದ್ದರು. ಆದರೆ, ಈ ಬಾರಿ ಮೆಂಟರ್ ಕಮ್ ಪ್ಲೇಯರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ವೇಳೆ ವೇದಿಕೆ ಮೇಲಿದ್ದ ದಿನಕರ್ ಮಾತಾಡಲು ಸಮಯ ತೆಗೆದುಕೊಂಡಾಗ, ಕಿಚ್ಚ ಸುದೀಪ್ ಮಧ್ಯೆ ಪ್ರವೇಶಿಸಿದ್ದರು. ಆ ವೇಳೆ ಇಬ್ಬರ ನಡುವೆ ನಡೆದ ಸಂಭಾಷಣೆ ಏನು? ಅನ್ನೋ ಕುತೂಹಲ ಇಲ್ಲಿದೆ.
ಕೆಸಿಸಿ ವೇದಿಕೆ ಮೇಲೆ ಸುದೀಪ್-ದಿನಕರ್
ಇತ್ತೀಚೆಗೆ ಸ್ಯಾಂಡಲ್‌ವುಡ್ ಕುಚಿಕುಗಳು ಒಂದಾಗಿಬಿಟ್ರು ಅಂತ ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದಾರೆ. ದರ್ಶನ್ ಮೇಲೆ ಚಪ್ಪಲಿ ಎಸೆದ ಪ್ರಕರಣದ ಬಳಿಕ ಸುದೀಪ್ ಬಗ್ಗೆ ಪತ್ರಕ್ಕೆ ದರ್ಶನ್ ಕೂಡ ಪ್ರತಿಕ್ರಿಯೆ ನೀಡಿದ್ದರು. ಈ ಬೆಳವಣಿಗೆಯ ಬಳಿಕ ಸುದೀಪ್ ಜೊತೆ ದಿನಕರ್ ತೂಗುದೀಪ ಕಾಣಿಸಿಕೊಂಡಿದ್ದಾರೆ. ಕರ್ನಾಟಕ ಚಲನಚಿತ್ರ ಕಪ್ ಸೀಸನ್ 3ನಲ್ಲಿ ಮೆಂಟರ್ ಕಮ್ ಪ್ಲೇಯರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಈ ವೇಳೆ ಕಿಚ್ಚ ಹಾಗೂ ದಿನಕರ್ ನಡುವೆ ಸುದೀಪ್ ಸರ್ ಇದ್ದಾರೆ'