ಭೂಮಿ ಖರೀದಿಸುವ ನೆಪದಲ್ಲಿ ಟೀಂ ಇಂಡಿಯಾ ವೇಗಿ ಉಮೇಶ್ ಯಾದವ್‌ಗೆ 44 ಲಕ್ಷ ರೂಪಾಯಿ ವಂಚನೆ

ಭೂಮಿ ಖರೀದಿಸುವ ನೆಪದಲ್ಲಿ ಟೀಂ ಇಂಡಿಯಾ ವೇಗಿ ಉಮೇಶ್ ಯಾದವ್‌ಗೆ 44 ಲಕ್ಷ ರೂಪಾಯಿ ವಂಚನೆ

ನಾಗ್ಪುರ: ಭಾರತದ ವೇಗದ ಬೌಲರ್ ಉಮೇಶ್ ಯಾದವ್ ಅವರ ಹೆಸರಿನಲ್ಲಿ ಪ್ಲಾಟ್ ಖರೀದಿಸುವ ನೆಪದಲ್ಲಿ ಅವರ ಸ್ನೇಹಿತ ಮತ್ತು ಮ್ಯಾನೇಜರ್ 44 ಲಕ್ಷ ರೂ.ಗಳನ್ನು ವಂಚಿಸಿದ ಘಟನೆ ಮಹಾರಾಷ್ಟ್ರದ ನಾಗ್ಪುರ ನಗರದಲ್ಲಿ ನಡೆದಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ನಾಗ್ಪುರದ ನಿವಾಸಿ ಯಾದವ್ ನೀಡಿದ ದೂರಿನ ಮೇರೆಗೆ ಶೈಲೇಶ್ ಠಾಕ್ರೆ ವಿರುದ್ಧ ವಂಚನೆಗಾಗಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಯಾದವ್ ಅವರ ಸ್ನೇಹಿತ. ಠಾಕ್ರೆ (37) ಕೊರಡಿ ನಿವಾಸಿಯಾಗಿದ್ದು, ಇದುವರೆಗೂ ಯಾರನ್ನೂ ಬಂಧಿಸಲಾಗಿಲ್ಲ ಎನ್ನಲಾಗಿದೆ.